

ಪುತ್ತೂರು: ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ನಿಯಮ ಪಾಲಿಸದೆ ಚಲಾಯಿಸಿಕೊಂಡು ಬಂದ ವಾಹನವೊಂದು ದ್ವಿಚಕ್ರ ವಾಹನಕ್ಕೆ ತೆಂಕಿಲ ಬಳಿ ಡಿಕ್ಕಿಯಾಗಿದೆ.
ಸುಳ್ಯ ಕಡೆಗೆ ಮೀನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ರಸ್ತೆ ಇನ್ನೊಂದು ಭಾಗದಲ್ಲಿ ಚಲಾಯಿಸಿ ಮುಂಭಾಗದಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊದ ಪರಿಣಾಮ ವಾಹನ ಸವಾರೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿರ ಕವಚ ಇದ್ದ ಕಾರಣದಿಂದ ಸವಾರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದ್ವಿಚಕ್ರ ವಾಹನದ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಲಾರಿಯೂ ರಸ್ತೆಯಲ್ಲಿ ಮಗುಚಿ ಬಿದ್ದಿದೆ.