ತೆಂಕಪೇಟೆ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

udp-24-svt
Published on

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ಗುರುವಾರ ಭಜನೆ ಹಾಗೂ ಶುಕ್ರವಾರ ಮುಂಜಾನೆ ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತ ವಿಶ್ವರೂಪ ದರ್ಶನ ನೆರವೇರಿತು.

ಶ್ರೀ ರಾಮ ದರ್ಶನ, ವೀರ ವಿಠಲ, ಶ್ರೀಕೃಷ್ಣ, ಗಜವದನ, ಈಶ್ವರ, ಮುಖ್ಯಪ್ರಾಣ ಹಾಗೂ ರಂಗೋಲಿಯಲ್ಲಿ ವಿವಿಧ ಬಗೆಯ ಚಿತ್ತಾರ, ಹಣತೆಯ ದೀಪದಿಂದ ಓಂ, ಸ್ವಸ್ತಿಕ್​, ಶಂಖ ಚಕ್ರಗಳನ್ನು ರಚಿಸಲಾಯಿತು. ಹೂಗಳಿಂದ ರಚಿಸಿದ ರಂಗೋಲಿ ಗಮನಸೆಳೆಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು.

ಧಾರ್ಮಿಕ ಪೂಜಾವಿಧಾನಗಳನ್ನು ಅರ್ಚಕ ವಿನಾಯಕ ಭಟ್​, ದಯಾಘನ್​ ಭಟ್​ ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ನರಸಿಂಹ ಕಿಣೆ, ಭಾಸ್ಕರ್​ ಶೆಣೈ, ಪ್ರದಿಪ್​ ರಾವ್​, ದೀಪಕ್​ ಭಟ್​, ಜಿ.ಎಸ್​.ಬಿ ಯುವಕ ಮಂಡಲದ ಅಧ್ಯಕ್ಷ ನಿತೇಶ್​ ಶೆಣೈ, ವಿಶಾಲ್​ ಶೆಣೈ, ಉಮೇಶ್​ ಪೈ, ನರಹರಿ ಪೈ, ಗಿರೀಶ ಭಟ್​, ಸತೀಶ್​ ಕಿಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net