ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಚಾಲನೆ

udp-18-bhajane
Published on

ಉಡುಪಿ: ತೆಂಕಪೇಟೆ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಶ್ರಾವಣ ಪುರುಷೋತ್ತಮ ಮಾಸ (ಅಧಿಕ ಮಾಸ) ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ದೇವಳದ ಅರ್ಚಕರಾದ ವಿನಾಯಕ ಭಟ್​, ದಯಾಘನ ಭಟ್​ ನೇತೃತ್ವದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆರತಿಯನ್ನು ಬೆಳಗಿಸಲಾಯಿತು.

ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ ,ಟ್ರಸ್ಟಿಗಳಾದ ಎಂ.ವಿಶ್ವನಾಥ್​ ಭಟ್​, ರೋಹಿತಾಕ್ಷ ಪಡಿಯಾರ್​,ಅಶೋಕ ಬಾಳಿಗ, ಪ್ರಕಾಶ್​ ಶೆಣೈ, ಮಟ್ಟಾರು ವಸಂತ ಕಿಣಿ, ಅಲೆವೂರು ಗಣೇಶ್​ ಕಿಣಿ, ದೇವದಾಸ್​ ಪೈ, ಮುಂಡಾಶಿ ಶಾಂತರಾಮ್​ ಪೈ,
ವಿಶಾಲ್​ ಶೆಣೈ, ಭಜನಾ ಉಸ್ತುವಾರಿ ಮಟ್ಟಾರು ಸತೀಶ್​ ಕಿಣಿ, ಸಮಾಜ ಮುಖಂಡರಾದ ಪುಂಡಲೀಕ್​ ಕಾಮತ್​, ಮುಂಡಾಶಿ ಪಾಂಡುರಂಗ ಪೈ,ಬಿ.ಭಾಸ್ಕರ್​ ಶೆಣೈ, ಜಗದೀಶ್​ ಪೈ, ಯು.ವಿವೇಕಾನಂದ ಶೆಣೈ, ಶ್ಯಾಮ್​ ಪ್ರಸಾದ್​ ಕುಡ್ವ, ಜಿ ಎಸ್​ ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೀಶ್​ ಶೆಣೈ, ಮಹಿಳಾ ಸಮಾಜದ ಅಧ್ಯಕ್ಷೆ ಎಚ್​ ಸುಧಾ ಶೆಣೈ, ಮ್ಯಾನೇಜರ್​ ಸುರೇಶ್​ ಭಟ್​, ಅಮ್ಮುಂಜೆ ವಿಠಲ್​ ದಾಸ್​ ನಾಯಕ್​, ಗುರುಪ್ರಸಾದ್​ ಕಾಮತ್​ ಮೊದಲಾದವರು ಉಪಸ್ಥಿತರಿದ್ದರು.

ಜಿಲೈ 18ರಂದು ಮುಂಜಾನೆ ಆರಂಭಗೊಂಡ ಭಜನೆಯು ನಿರಂತರ ಒಂದು ತಿ0ಗಳ ಕಾಲ ಜರಗಲಿದ್ದು, ಆ. 17ರಂದು ಮಂಗಲಾಚರಣೆ ನಡೆಯಲಿದೆ. ಈ ಭಜನಾ ಮಹೋತ್ಸವದ ಅಂಗವಾಗಿ ಪ್ರತಿ ಭಾನುವಾರ ನಗರ ಭಜನೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net