ನಿಧಾನಗತಿ ಕಾಮಗಾರಿಗೆ ಶಾಸಕ ಟೆಂಗಿನಕಾಯಿ ಅಸಮಾಧಾನ

Mahesh New
Published on

ಹುಬ್ಬಳ್ಳಿ : ಮಹಾನಗರ ಪಾಲಿಕೆ ವಾರ್ಡ್ ನಂ. 39, 41 ಹಾಗೂ 45ರ ವ್ಯಾಪ್ತಿಯ ಅಶೋಕನಗರ ಕೆಳ ಸೇತುವೆಯಿಂದ ನೃಪತಂಗ ಬೆಟ್ಟದವರೆಗೆ ನಡೆಯುತ್ತಿರುವ 2.5 ಕಿಲೋಮಿಟರ್ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಮಹೇಶ ಟೆಂಗಿನಕಾಯಿ, ನಿಧಾನಗತಿಯ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿಗೆ ನೀಡಿದ್ದ ಗಡುವು ಮುಗಿಯುತ್ತ ಬಂದಿದ್ದರೂ ಇನ್ನೂ ಕೆಲಸ ನಡೆಯುತ್ತಿದೆ. ಈವರೆಗೂ ರಸ್ತೆ ನಿರ್ವಣದ ಕೆಲಸ ಏಕೆ ಪೂರ್ಣಗೊಂಡಿಲ್ಲ ಎಂದು ಶಾಸಕ ಟೆಂಗಿನಕಾಯಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಪ್ರಶ್ನಿಸಿದರು.

ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಸಿ.ವಿ. ಪಾಟೀಲ, ಲಲಿತಾ ಗೌಡರ, ಪಾಲಿಕೆ ಜೆಇ ವೀರೇಶ ಸವಡಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಚನ್ನು ಹೊಸಮನಿ, ವಿಶ್ವನಾಥ ಪಾಟೀಲ, ವಿಜಯಾನಂದ ಹೊಸಕೋಟೆ, ರಘು ಧಾರವಾಡಕರ, ಆನಂದ ಪಾಟೀಲ ಹಾಗೂ ಇತರರು ಹಾಜರಿದ್ದರು.

=========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net