ನಿರಂತರ ನೀರು ಪೂರೈಕೆಯ ಭರವಸೆ ನೀಡಿದ ಶಾಸಕ ಟೆಂಗಿನಕಾಯಿ

NEW TENGINAYI NEW
Published on

ಹುಬ್ಬಳ್ಳಿ : ಇಲ್ಲಿನ ವಾರ್ಡ್ ನಣ. 43ರ ಕಾಮಾಕ್ಷಿಪುರಂನಲ್ಲಿ ನಿರ್ವಣಗೊಳ್ಳುತ್ತಿರುವ ಓವರ್​ಹೆಡ್ ವಾಟರ್ ಟ್ಯಾಂಕ್ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಹೊಸ ಬಡಾವಣೆಯಲ್ಲಿ 600ಕ್ಕೂ ಹೆಚ್ಚು ಮನೆಗಳು ಇವೆ. ಮುಂದಿನ ದಿನಗಳಲ್ಲಿ ನಿರಂತರ ನೀರು ಪೂರೈಸಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ರಸ್ತೆ ಹಾಗೂ ಒಳ ಚರಂಡಿ ಸಮಸ್ಯೆ ಕುರಿತು ಸಾರ್ವಜನಿಕರು ದೂರು ನೀಡಿದರು. ಅಧಿಕಾರಿಗಳೊಂದಿಗೆ ರ್ಚಚಿಸಿ, ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಟೆಂಗಿನಕಾಯಿ ಆಶ್ವಾಸನೆ ನೀಡಿದರು.

ಪಾಲಿಕೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಭೀರಪ್ಪ ಖಂಡೇಕರ, ಪ್ರಮುಖರಾದ ನಾಗರಹಳ್ಳಿ, ಗೋವಿಂದ ಕೊನ್ನುರ, ಸತೀಶ ಬೊಮ್ಮನಹಳ್ಳಿ, ರಾಘು ಹಬೀಬ, ಹರೀಶ ಜರತಾರಗಾರ, ತಾರಾಮತಿ ವಾಸಪ್ಪನವರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net