ಜೋಶಿ ಚುನಾಯಿಸಲು ಟೆಂಗಿನಕಾಯಿ ಮನವಿ

new Election new 22
Published on

ಹುಬ್ಬಳ್ಳಿ : ಸ್ಮಾರ್ಟ್​ಸಿಟಿ ಯೋಜನೆ ಅನುಷ್ಠಾನ, ಗುಣಮಟ್ಟದ ರಸ್ತೆ, ಬೈಪಾಸ್ ರಸ್ತೆ ನಿರ್ವಣ, ಫ್ಲೈ ಓವರ್ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ಈ ಬಾರಿಯೂ ಚುನಾಯಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಮನವಿ ಮಾಡಿದರು.

ಮಹಾನಗರ ಪಾಲಿಕೆ 46ನೇ ವಾರ್ಡ್ ವ್ಯಾಪ್ತಿಯ ಮಡಿವಾಳ ನಗರ, ಚನ್ನಮ್ಮ ಶಾಲೆ, ವಿಘ್ನೇಶ್ವರ ಶಾಲೆ, ದೇಶಪಾಂಡೆ ಲೇಔಟ್, ಭವಾನಿ ನಗರ, ಉದಯನಗರದಲ್ಲಿ ಆಯೋಜಿಸಿದ್ದ ಸರಣಿ ಚುನಾವಣೆ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಕಾಣುತ್ತಿದೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ವೀರಣ್ಣ ಸವಡಿ, ಬಿಜೆಪಿ ವಕ್ತಾರ ರವಿ ನಾಯಕ, ಎಚ್.ಎಸ್. ಕಿರಣ, ಪ್ರಶಾಂತ ಹಾವಣಗಿ, ಚೇತನ ಕಲಾಲ, ಜಗದೀಶ ಗೋಣಿ, ಬಸಮ್ಮ ಕೊಂತ್, ಸ್ವಪ್ನ ಶಿಂಧೆ, ರಾಮು ಕಡಬಗೆರಿ, ಪ್ರಶಾಂತ ಜೋಶಿ, ನಾಗರಾಜ ಶೆಟ್ಟಿ, ಸದಾನಂದ ಚರಂತಿಮಠ, ರೋಹನ ಅಥಣಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net