ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಆರಂಭ

18sirsi4- areca
Published on

ಶಿರಸಿ: ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ನಗರದ ಸಹಕಾರಿ ಸಂಘಗಳಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಮೊದಲ ದಿನ ರೈತರಿಗೆ ನಿರೀಕ್ಷಿತ ದರ ದೊರೆಯದೇ ನಿರಾಸೆ ಮೂಡಿಸಿದೆ.

ನಗರದ ಟಿಎಂಎಸ್ ಮತ್ತು ಕದಂಬ ಮಾರ್ಕೆಟಿಂಗ್​ನಲ್ಲಿ ಹಸಿ ಅಡಕೆ ಟೆಂಡರ್ ಆರಂಭಿಸಲಾಗಿದೆ. ಮೊದಲ ದಿನ ಕೆಲವೇ ರೈತರಿಂದ 20 ಕ್ವಿಂಟಾಲ್​ಗಳಷ್ಟು ಮಾತ್ರ ಹಸಿ ಅಡಕೆ ಬಂದಿದೆ. ಗೋಟಡಕೆ ಪ್ರತಿ ಕ್ವಿಂಟಾಲ್ ಗೆ 2300 ರೂ.ನಿಂದ 5016 ರೂ. ದರ ಪಡೆದರೆ, ಕಾಯಡಿಕೆ 1 ಸಾವಿರದಿಂದ 4051 ರೂ. ದರವಾಗಿದೆ.

ಕಳೆದ ವರ್ಷ ಕಾಯಡಿಕೆ ಪ್ರತಿ ಕ್ವಿಂಟಾಲ್​ಗೆ 5 ಸಾವಿರ ರೂ. ಸರಾಸರಿ ದರ ಲಭಿಸಿದ್ದರೆ ಗೋಟಡಿಕೆ 6 ಸಾವಿರ ರೂ. ಲಭಿಸಿತ್ತು. ಇದು ಆರಂಭಿಕ ದಿನವಾದ್ದರಿಂದ ವ್ಯಾಪಾರಸ್ಥರೂ ಟೆಂಡರ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net