ತರೀಕೆರೆಯಲ್ಲಿ ಅಡಕೆ ಖರೀದಿಗೆ ಟೆಂಡರ್

arecaka
ತರೀಕೆರೆ ಅಡಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಟಿ.ಜಿ.ಶಶಾಂಕ್ ಮಾತನಾಡಿದರು. ಕೆ.ಜಿ.ತಿಪ್ಪೇಶ್, ಕೆ.ಆರ್.ಧ್ರುವಕುಮಾರ್, ಕೆ.ಪಿ.ಕುಮಾರ್, ಟಿ.ಆರ್.ಶ್ರೀಧರ್, ಟಿ.ಎಸ್.ರಮೇಶ್ ಇತರರಿದ್ದರು.
Published on

ತರೀಕೆರೆ: ಅಡಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘ 2.24 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಟಿ.ಜಿ.ಶಶಾಂಕ್ ತಿಳಿಸಿದರು.

ಎಪಿಎಂಸಿ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, 2022-23ನೇ ಸಾಲಿನಲ್ಲಿ 6.79 ಕೋಟಿ ರೂ. ವಹಿವಾಟು ನಡೆಸಿದೆ ಎಂದರು.
ಅಡಕೆಗೆ ಸ್ಪರ್ಧಾತ್ಮಕ ದರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಸಕ್ತ ವರ್ಷವೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಅಡಕೆ ದರ ಕುಸಿತಕ್ಕೆ ಒಳಗಾದ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕ ಬಲ ನೀಡಲು ಕಡಿಮೆ ಬಡ್ಡಿ ದರದಲ್ಲಿ ಅಡಮಾನ ಸಾಲ ನೀಡಲಾಗುವುದು. ಕೈ ವ್ಯಾಪಾರದಲ್ಲಿ ರೈತರು ಮೋಸ ಹೋಗುವುದರಿಂದ ಬೆಳೆಗಾರರು ಸಹಕಾರ ಸಂಘಗಳಲ್ಲೇ ವ್ಯಾಪಾರ ನಡೆಸಬೇಕು. ಇದರಿಂದ ಸರ್ಕಾರಕ್ಕೂ ತೆರಿಗೆ ಸಂಗ್ರಹವಾಗಲಿದೆ. ಅಡಕೆ ಬೆಳೆಗಾರರಿಗೆ ಸುಸ್ಥಿರ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಜಿ.ತಿಪ್ಪೇಶ್, ನಿರ್ದೇಶಕರಾದ, ಕೆ.ಆರ್.ಧ್ರುವಕುಮಾರ್, ಕೆ.ಪಿ.ಕುಮಾರ್, ಟಿ.ಎಸ್.ರಮೇಶ್, ಟಿ.ಆರ್.ಶ್ರೀಧರ್, ಟಿ.ಕೆ.ಜಯರಾಮ್, ಶಾಂತಪ್ಪ, ಟಿ.ಸಿ.ಈರಪ್ಪ, ಟಿ.ಎನ್.ಆನಂದ, ಡಿ.ಎ.ಸಚಿನ್, ದೇವರಾಜು, ಎಚ್.ಯಶೋಧಮ್ಮ, ಜೆ.ಸಿ.ಪ್ರೇಮಾ, ಸಿಇಒ ಟಿ.ಜೆ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net