

ಎಚ್.ಡಿ.ಕೋಟೆ: ಪ್ರಸ್ತುತ ದಿನಗಳಲ್ಲಿ ವಿದ್ಯೆ ಕಲಿಸಿದ ಗುರುವಿಗೆ ವಿದ್ಯಾರ್ಥಿಗಳು ಗೌರವ ಸೂಚಿಸುವ ಪ್ರವೃತ್ತಿಯೇ ಇಲ್ಲವಾಗಿದೆ ಎಂದು ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪ ನಿರ್ದೇಶಕ ಮರಿಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಹಿಂದಿನ ದಿನಗಳಲ್ಲಿ ವಿದ್ಯೆ ಬುದ್ಧಿ ಕಲಿಸಿದ ಗುರುವನ್ನು ಕಂಡ ವಿದ್ಯಾರ್ಥಿಗಳು ಗುರುವಿಗೆ ಮನಸ್ಫೂರ್ವಕವಾಗಿ ಗೌರವ ನೀಡುತ್ತಿದ್ದರು. ಅಂದು ಗುರುವಿಗೆ ಗೌರವ ನೀಡಿದ ವಿದ್ಯಾರ್ಥಿಗಳು ಇಂದು ಹಲವು ಪ್ರಮುಖ ಹುದ್ದೆಗಳಲ್ಲಿ ರಾರಾಜಿಸುತ್ತಿದ್ದಾರೆ ಎಂದು ತಿಳಿಸಿದರು.
ಉಪ ನಿರ್ದೇಶಕ ಆನಂದರಾಜು ಮಾತನಾಡಿ, ಶಿಕ್ಷಕ ವಿದ್ಯಾರ್ಥಿ ರೀತಿ ನಿರಂತರ ಕಲಿಕೆಗೆ ತುಡಿತ ವ್ಯಕ್ತಪಡಿಸಿದಾಗ ಮಾತ್ರ ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯ. ಶಿಕ್ಷಕ ವೃತ್ತಿ ವೇತನ ಪಡೆದು ಮಾಡುವ ಕೆಲಸವಾಗಿದ್ದು, ವಿದ್ಯಾರ್ಥಿಗಳಿಂದ ನಮ್ಮ ಜೀವನ ನಡೆಯುತ್ತದೆ. ಆದರೆ ಪ್ರತಿಫಲ ಪಡೆಯದೆ ಮಾಡುವ ಕೆಲಸ ಮಾತ್ರ ಸೇವೆ ಆಗಿರುತ್ತದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯಶಿಕ್ಷಕ ಎಚ್.ಎನ್.ಎಸ್ ಬೇಗ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಂ.ವಿ.ಹನುಮಂತರಾವ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಮಹಮೂರ್ತಿ, ನಿವೃತ್ತ ಪ್ರಾಂಶುಪಾಲರಾ ಚಲುವಯ್ಯ, ಉಪನ್ಯಾಸಕರಾದ ಮೋಹನ್, ಕಾಳಿಂಗೇಗೌಡ, ಚಲುವೇ ಅರಸ್, ಮುತ್ತುರಾಜ್, ನಂದೀಶ್, ರವೀಂದ್ರ, ವೀರಪ್ಪಾಜಿ, ಶಿವರಾಮಯ್ಯ, ಮಲ್ಲಿಕಾರ್ಜುನಸ್ವಾಮಿ, ನಿವೃತ್ತ ಶಿಕ್ಷಕರಾದ ಶಿವಸ್ವಾಮಿ, ಪದ್ಮನಾಭ್, ಶ್ರೀಲತಾ, ಸಿದ್ದರಾಜು, ಕೆ.ಸವಿತಾ, ಬೇಗ್, ಮೈಥಿಲಿ, ಶಿವಾನಂದಸ್ವಾಮಿ, ಕೆ.ಸಿ.ಕೊಂಡಯ್ಯ, ಲಂಕಣ್ಣ, ಎಂ.ಕೆ.ಪುಟ್ಟಸ್ವಾಮಿ, ಲಕ್ಷ್ಮೀನಾರಾಯಣ, ಮಂಜುನಾಥ, ಚಿಕ್ಕಣ್ಣ, ಜವರಯ್ಯ, ಮಹೇಶ್, ಮಹದೇವಮ್ಮ, ಉಷಾಕಿರಣ, ಪಿ.ಗುಣ, ಲೀಲಾವತಿ, ಚನ್ನಪ್ಪ, ರಮೇಶ್, ರಾಜೇಶ್, ರವಿಕುಮಾರ್, ಪುರಸಭಾ ಸದಸ್ಯ ಐಡಿಯಾ ವೆಂಕಟೇಶ್, ಹನುಮಯ್ಯ, ಗುರುಸ್ವಾಮಿ, ಮೂರ್ತಿ, ಜೀವಿಕ ಬಸವರಾಜು, ಮುದ್ದುಮಲ್ಲಯ್ಯ ಇದ್ದರು.