

ಬೆಂಗಳೂರು: ತಂದೆಯ ಕಣ್ಣೆದುರೇ ಬಾಲಕನೊಬ್ಬ ವಾಹನದಡಿಗೆ ಸಿಲುಕಿ ಸಾವಿಗೀಡಾದ ಕರುಣಾಜನಕ ಘಟನೆಯೊಂದು ಇಂದು ರಾಜಧಾನಿಯಲ್ಲಿ ಸಂಭವಿಸಿದೆ. ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಹೆಡ್ ಕಾನ್ಸ್ಟೆಬಲ್ ಸಂತೋಷ್ ಅವರ ಪುತ್ರ ಜೀವನ್ (10) ಸಾವಿಗೀಡಾದ ಬಾಲಕ. ಇಂದು ಸಂತೋಷ್ ಅವರು ಪುತ್ರನನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಕೆ.ಆರ್.ಪುರ ಮುಖ್ಯರಸ್ತೆ ವಿಜಯ ಬ್ಯಾಂಕ್ ಮುಂಭಾಗ ಬೈಕ್ ಸ್ಕಿಡ್ ಆಗಿದೆ.
ಬೈಕ್ ಸ್ಕಿಡ್ ಆಗುತ್ತಿದ್ದಂತೆ ಬಾಲಕ ಬಿದ್ದಿದ್ದಾನೆ. ಆಗ ಹಿಂದಿನಿಂದ ಬರುತ್ತಿದ್ದ ಮಿಲಿಟರಿ ವಾಹನವೊಂದು ಬಾಲಕನ ಮೇಲೆ ಸಾಗಿದ್ದು, ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳಕ್ಕೆ ಕೆ.ಆರ್.ಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.