ಕೆಎಸ್ಒಯು ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ

mys
Published on

ಮೈಸೂರು: ಮೀಸಲಾತಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶೀತಲ್ ಎಂ.ಹಿರೇಮಠ ತಾಕೀತು ಮಾಡಿದ್ದಾರೆ.


7 ಪ್ರಾಧ್ಯಾಪಕರು, 25 ಸಹ ಪ್ರಾಧ್ಯಾಪಕರು ಸೇರಿದಂತೆ 32 ಬೋಧಕರು, 32 ಬೋಧಕೇತರ ಹುದ್ದೆಗಳ ಭರ್ತಿಗೆ ವಿವಿ ಕ್ರಮ ವಹಿಸಿತ್ತು. ಆದರೆ, ಮೀಸಲಾತಿ ಉಲ್ಲಂಘನೆಯಾಗಿರುವ ಕುರಿತು ವಿಧಾನಮಂಡಲದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ಬಂದಿದೆ.

ನೇಮಕಾತಿಗೆ ಸಂಬಂಧಿಸಿದ ಮೀಸಲಾತಿ, ರೋಸ್ಟರ್ ಅನ್ನು ನಿಯಮಾನುಸಾರ ಗುರುತಿಸಿರುವ ಕುರಿತು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆ, ಸಿಬ್ಬಂದಿ ಆಡಳಿತ ಸುಧಾರಣೆ(ಹೈ.ಕ.ಮೀಸಲಾತಿ) ಇಲಾಖೆಗಳಿಂದ ಅಭಿಪ್ರಾಯ ಪಡೆದು ಸಹಮತ ಪಡೆದುಕೊಳ್ಳಬೇಕು.

ಈ ಇಲಾಖೆಗಳು ಪರಿಶೀಲನೆ ನಡೆಸಿ ನಿಯಮಬದ್ಧವಾಗಿದೆ ಎಂದು ಅನುಮೋದನೆ ನೀಡುವವರೆಗೂ ತಾತ್ಕಾಲಿಕ, ಕಾಯಂ ಹುದ್ದೆಗಳ ನೇಮಕಾತಿಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net