ಮೀನು ಕಟ್ಟಿಂಗ್ ಶೆಡ್ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ

thahasheeldar
ಮೀನು ಕಟ್ಟಿಂಗ್ ಶೆಡ್ ಪ್ರದೇಶಕ್ಕೆ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಭೇಟಿ ನೀಡಿದರು.
Published on

ಕೋಟ: ಕೋಟತಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯ ಪಡುಕರೆ ಅರಮ ದೇಗುಲ ಸಮೀಪದ ಮೀನು ಕಟ್ಟಿಂಗ್ ಶೆಡ್ ಹಾಗೂ ಅಲ್ಲಿನ ಗ್ರಾಮಸ್ಥರ ನಡುವೆ ನಡೆಯುತ್ತಿದ್ದ ಕಲಹ ಗುರುವಾರ ಸುಖಾಂತ್ಯ ಕಂಡಿತು.

ಮೀನು ಕಟ್ಟಿಂಗ್ ಶೆಡ್‌ನಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕೋಟತಟ್ಟು ಗ್ರಾಪಂ ಹಾಗೂ ಬ್ರಹ್ಮಾವರ ತಹಸೀಲ್ದಾರ್‌ಗೆ ದೂರು ನೀಡಿದ್ದರು. ಸಮಸ್ಯೆ ಬಗೆಹರಿಸಲು ತಹಸೀಲ್ದಾರ್ ಶ್ರೀಕಾಂತ್.ಎಸ್.ಹೆಗ್ಡೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಹಾಗೂ ಕೋಟ ಠಾಣೆ ಆರಕ್ಷಕರ ಸಮ್ಮುಖದಲ್ಲಿ ವಾತುಕತೆ ಮೂಲಕ ಬಗೆಹರಿಸಿದರು.

ಕಳೆದ 15 ವರ್ಷಗಳಿಂದ ಮೀನು ಕಟ್ಟಿಂಗ್ ಶೆಡ್ ಕಾರ್ಯನಿರ್ವಹಿಸುತ್ತಿದ್ದು, 100ಕ್ಕೂ ಅಧಿಕ ಮುಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನು ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ಅಲ್ಲಿಗೆ ತಲುಪುವ ಮಾರ್ಗವನ್ನು ಬಂದ್ ಮಾಡಿದ್ದರು. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಲೇರಿತು. ಆದರೆ ಕೋರ್ಟ್ ಈ ಹಿಂದೆ ಇದ್ದಂತೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು.

ಇದರಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ತಹಸೀಲ್ದಾರ್ ಹಾಗೂ ಪಂಚಾಯಿತಿ ಅಧ್ಯಕ್ಷ, ಕೋಟ ಠಾಣಾಧಿಕಾರಿ ಸಮ್ಮುಖದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಲಹೆ ನೀಡಿ ಸಮಸ್ಯೆಗೆ ತಾತ್ಕಾಲಿಕ ಶಮನ ನೀಡಲಾಯಿತು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್, ಕೋಟ ಠಾಣಾಧಿಕಾರಿ ಪ್ರವೀಣ್ ಕುವಾರ್, ಸುಧಾ ಪ್ರಭು, ಪಂಚಾಯಿತಿ ವಾರ್ಡ್ ಸದಸ್ಯರು, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಗ್ರಾಮ ಲೆಕ್ಕಿಗ ಚಲುವರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net