ತಾತ್ಕಾಲಿಕ ಗುರುತಿನ ಚೀಟಿ ನೀಡಲು ಆಗ್ರಹ

29MDL1-Web
ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರಿಗೆ ಬೀದಿ ಬದಿ ವ್ಯಾಪಾರಸ್ಥರು ಮನವಿ ಸಲ್ಲಿಸಿದರು. ಪ್ರಕಾಶ ಮಾದರ, ನಂಜುಂಡಿ ಸರ್ವಿ, ಬಾಳು ಭಜಂತ್ರಿ, ಲಕ್ಷ್ಮಣ ಮಳ್ಳಿಗೇರಿ, ಮಾದೇವ ಶೆಕ್ಕಿ, ಯಶವಂತ ಮಂಟೂರ ಇತರರು ಇದ್ದರು.
Published on

ಮೂಡಲಗಿ: ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ತಾತ್ಕಾಲಿಕ ಗುರುತಿನ ಚೀಟಿ ನೀಡಬೇಕು ಎಂದು ಯಶವಂತ ಸರ್ವಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರಿಗೆ ಶುಕ್ರವಾರ ವ್ಯಾಪಾರಸ್ಥರು ಮನವಿ ಸಲ್ಲಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಪೈಕಿ ಕೆಲವರಿಗೆ ಮಾತ್ರ ಅಧಿಕೃತವಾಗಿ ಗುರುತಿನ ಚೀಟಿಗಳನ್ನು ನೀಡಿದ್ದು, ಬಹಳಷ್ಟು ಜನರನ್ನು ಅಧಿಕಾರಿಗಳು ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಇದರಿಂದ ಸರ್ಕಾರದಿಂದ ಬರುವ ಸಹಾಯಧನದಿಂದ ವ್ಯಾಪಾರಸ್ಥರು ವಂಚಿತರಾಗುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇನ್ನೊಮ್ಮೆ ಸರ್ವೇ ಮಾಡಿ ಇನ್ನುಳಿದ ಬೀದಿ ಬದಿ ವ್ಯಾಪಾರಸ್ಥರಿಗೂ ತಾತ್ಕಾಲಿಕ ಗುರುತಿನ ಚೀಟಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪ್ರಕಾಶ ಮಾದರ, ನಂಜುಂಡಿ ಸರ್ವಿ, ಬಾಳು ಭಜಂತ್ರಿ, ಲಕ್ಷ್ಮಣ ಮಳ್ಳಿಗೇರಿ, ಮಾದೇವ ಶೆಕ್ಕಿ, ಯಶವಂತ ಮಂಟೂರ, ಅಶೋಕ ಸಿದ್ಲಿಂಗಪ್ಪಗೋಳ, ಸುರೇಶ ಸಣ್ಣಕ್ಕಿ, ಈರಪ್ಪ ಢವಳೇಶ್ವರ, ಸಂಗೀತಾ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net