ಕೆಎಸ್ಸಾಟಿರ್ಸಿಯಲ್ಲಿ ಅನುಕಂಪದ ನೇಮಕಾತಿ ತಾತ್ಕಾಲಿಕ ರದ್ದು

ksrtc office
Published on

ಬೆಂಗಳೂರು: ಕರೊನಾದಿಂದ ಆಥಿರ್ಕ ಸಂಕಷ್ಟದಲ್ಲಿರುವ ಕೆಎಸ್ಸಾಟಿರ್ಸಿ ಈ ವರ್ಷ ಅನುಕಂಪದ ಆಧಾರಿತ ನೇಮಕಾತಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ. ಪ್ರಯಾಣಿಕರ ಕೊರತೆಯಿಂದ ಆಥಿರ್ಕ ನಷ್ಟದಲ್ಲಿರುವ ಕೆಎಸ್ಸಾಟಿರ್ಸಿ ಹಲವು ಉಳಿತಾಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ನೌಕರರ ಭತ್ಯೆ ಕಡಿತ, ಹೊಸ ನೇಮಕಾತಿಗೆ ತಡೆ ಸೇರಿ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅದರ ಜತೆಗೆ ಇದೀಗ ಸೇವಾವಧಿಯಲ್ಲಿ ಅಕಾಲಿಕ ಮರಣ ಹೊಂದುವ ನಿಗಮದ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಳೆ ವಿದ್ಯಾರ್ಹತೆಯನುಸಾರ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿತ್ತು. ನಿಗಮದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಹತೆಯನ್ನಾಧರಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಿಗಮ ಆಥಿರ್ಕ ಸಂಕಷ್ಟದಲ್ಲಿದೆ. ಹೀಗಾಗಿ ಮುಂದಿನ ಆಥಿರ್ಕ ವರ್ಷ ಅಥವಾ ಮುಂದಿನ ಆದೇಶದವರೆಗೆ ಈ ಅನುಕಂಪ ಆಧಾರಿತ ನೇಮಕಾತಿ ಪ್ರಕ್ರಿಯೆ ಕೈಗೊಳ್ಳದಿರಲು ತೀರ್ಮಾನಿಸಲಾಗಿದೆ. ಆದರೆ, ಅನುಕಂಪದ ಆಧಾರದ ನೌಕರಿಗೆ ಸಲ್ಲಿಸುವ ಅಜಿರ್ಗಳನ್ನು ಸ್ವೀಕರಿಸಲಾಗುತ್ತದೆ. ಮುಂದೆ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದನ್ನು ಪರಿಗಣಿಸಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net