

ಸಿಂದಗಿ: ತಾಲೂಕಿನ ಮನ್ನಾಪುರ ಗ್ರಾಮದ ಬಳಿ ಸೋಮವಾರ ಜವಳಕ್ಕೆ ಹೊರಟಿದ್ದ ವೇಳೆ ಟೆಂಪೋವೊಂದು ಪಲ್ಟಿಯಾಗಿ ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತಾಲೂಕಿನ ಹಿಕ್ಕನಗುತ್ತಿ ಗ್ರಾಮದಿಂದ ಗೋಲಗೇರಿಯ ಗೊಲ್ಲಾಳೇಶ್ವರನ ದೇವಸ್ಥಾನಕ್ಕೆ ಜವಳ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಟೆಂಪೋ ಪಲ್ಟಿಯಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಾಲ್ವರಲ್ಲಿ ಹಿಕ್ಕನಗುತ್ತಿ ಗ್ರಾಮದ ಶಿವಶಂಕರ ಬಿರಾದಾರ (70) ಹಾಗೂ ಸ್ವಾತಿ ತಂದೆ ಗುರಣ್ಣ ಬಿರಾದಾರ (9) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭಾಗೀರಥಿ ಬಿರಾದಾರ (65), ಶರಣಪ್ಪ ಬಿರಾದಾರ(85) ಗಂಭೀರವಾಗಿ ಗಾಯಗೊಂಡಿದ್ದು ವಿಜಯಪುರದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಸಿಂದಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.