

ವಿಜಯವಾಣಿ ಸುದ್ದಿಜಾಲ ಬೈಂದೂರು
ದೇವಾಲಯಗಳು ಸಗುಣೋಪಾಸನೆ ಮಾಡುವ ಪವಿತ್ರ ಸ್ಥಳವಾಗಿದ್ದು, ಸನಾತನ ಧರ್ಮದ ಉಳಿವಿಗೆ ದೇವಾಲಯಗಳ ಪಾತ್ರ ಹಿರಿದು ಎಂದು ನಾರಾಯಣ ಪ್ರಭು ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ಲಕ್ಷ್ಮೀನಾರಾಯಣ ಪ್ರಭು ಹೇಳಿದರು.
ನಾಯ್ಕನಕಟ್ಟೆ ಅವಧಾನಿ ಕುಟುಂಬಸ್ಥರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಸಭೆಯಲ್ಲಿ ಪಿಎಚ್.ಡಿ ಪದವಿ ಪುರಸ್ಕೃತ ಡಾ.ಹರೀಶ ಭಟ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ರಮಾನಂದ ಭಟ್ ಮುಂಬೈ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೆ.ಪುಂಡಲೀಕ ನಾಯಕ್, ಶ್ರೀ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಜೇಶ ಪೈ, ಮಾಜಿ ಅಧ್ಯಕ್ಷ ದಾಮೋದರ ಶೆಣೈ, ರಮೇಶ ಪೈ, ನಿವೃತ್ತ ಸಿಇಒ ಸತೀಶ ವಾಮನ ಪೈ, ಅರ್ಚಕ ಜಗದೀಶ ಭಟ್ ಕುಂದಾಪುರ, ವೀರವಿಠ್ಠಲ ಭಟ್ ನಾಯ್ಕನಕಟ್ಟೆ ಇದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗೋಪಾಲ ಭಟ್ ಪ್ರಸ್ತಾವಿಸಿದರು. ಉಜ್ವಲ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ತೆಕ್ಕಟ್ಟೆ ಶ್ರೀ ಸುಧೀಂದ್ರತೀರ್ಥ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.
ಅರ್ಚಕರು ವೇದ ಮಂತ್ರಗಳಿಂದ ನಿಯಮಾನುಸಾರ ಸಾತ್ವಿಕ ಕಾರ್ಯಗಳನ್ನು ನಡೆಸಬೇಕು. ವಿಭಿನ್ನ ಹೆಸರುಗಳಿಂದ ಗುರುತಿಸುವ ದೇವರು ಎಲ್ಲವನ್ನು ಮೀರಿದ ಶಕ್ತಿ. ದೇವರ ನಾಮಸ್ಮರಣೆಯಿಂದ ಒಳಿತಾಗುತ್ತದೆ. ಪ್ರಾಚೀನ ಪರಂಪರೆಯ ಚಾರಿತ್ರಿಕ ಇತಿಹಾಸವುಳ್ಳ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಗತ ವೈಭವಕ್ಕೆ ಮರಳಿದೆ. ಕಲಿಯುಗದಲ್ಲಿ ಭಕ್ತರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವ ವೆಂಕಟರಮಣ ದೇವರು ಸರ್ವರನ್ನೂ ಅನುಗ್ರಹಿಸಲಿ. ಲಕ್ಷ್ಮೀನಾರಾಯಣ ಪ್ರಭು ನಾರಾಯಣ ಪ್ರಭು ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ.