ದೇವಾಲಯಗಳು ಶಾಂತಿ, ಸೌಹಾರ್ದತೆಯ ಪ್ರತೀಕ

FotoJet
Published on

ಶ್ರೀನಿವಾಸರೆಡ್ಡಿ ಅಭಿಮತ ಪಾಳ್ಯಕೆರೆ ಲಕ್ಷ್ಮೀವೆಂಕಟೇಶ್ವರ ದೇಗುಲ ವಿಗ್ರಹ ಪ್ರತಿಷ್ಠಾಪನೆ

ಚೇಳೂರು: ದೇವಸ್ಥಾನಗಳು ಶಾಂತಿ ಮತ್ತು ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಎಂದು ಸಮಾಜಸೇವಕ ಹಾಗೂ ಬಿಜೆಪಿ ಮುಖಂಡ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಹೇಳಿದರು.

ತಾಲೂಕಿನ ಪಾಳ್ಯಕೆರೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಗ್ರಾಮಗಳಲ್ಲಿ ಶಕ್ತಿಯಾನುಸಾರ ಗ್ರಾಮಸ್ಥರು ದೇವಾಲಯ ಕಟ್ಟಿಸಿರುತ್ತಾರೆ. ಇದು ದೇವರ ಬಗೆಗಿರುವ ಜನರ ನಂಬಿಕೆ ಹಾಗೂ ಭಕ್ತಿಯನ್ನು ತೋರಿಸುತ್ತದೆ. ಗ್ರಾಮಗಳಲ್ಲಿರುವ ದೇವಾಲಯಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದದ ಪ್ರತೀಕವಾಗಿವೆ ಎಂದರು.

ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ನಿರ್ಲಕ್ಷಿಸದೆ ಅನುಸರಿಸಿದರೆ ಲೋಕಕ್ಕೆ ಒಳ್ಳೆಯದಾಗುತ್ತದೆ. ಇತ್ತೀಚೆಗೆ ಯುವಪೀಳಿಗೆ ಆಧುನಿಕತೆಯ ಗುಂಗಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ. ಇದು ಶೋಚನೀಯ ವಿಚಾರ. ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು. ಧಾರ್ಮಿಕತೆಯ ಬಗ್ಗೆ ತಿಳಿಸಬೇಕು, ಕೇವಲ ಪುಸ್ತಕಗಳಿಗಷ್ಟೇ ಸೀಮಿತಗೊಳಿಸದೆ ಧಾರ್ಮಿಕತೆಯ ಪಾಠವನ್ನೂ ಮಾಡಬೇಕಾಗಿದೆ. ದೇವಾಲಯಗಳ ನಿರ್ಮಾಣ ಪವಿತ್ರ ಕೆಲಸವಾಗಿದ್ದು, ಕಷ್ಟವಾರೂ ನಿರಂತರವಾಗಿ ನಡೆಯುತ್ತಿರಬೇಕು ಎಂದರು.

ದೇವಾಲಯಗಳು ಸಭೆ ಸಮಾರಂಭಗಳಿಗೆ ಕೇಂದ್ರಬಿಂದುಗಳಾಗಿ ಕಾರ್ಯನಿರ್ವಹಿಸುತ್ತವೆ, ಏಕತೆಯ ಭಾವನೆ ಮತ್ತು ಹಂಚಿಕೆಯ ಗುರುತನ್ನು ಬೆಳೆಸುತ್ತವೆ. ಸಾಮಾಜಿಕ ಗಡಿಗಳನ್ನು ಮೀರಿ ಜನರನ್ನು ಒಟ್ಟುಗೂಡಿಸುತ್ತವೆ. ಶಿಕ್ಷಣವು ಕೇವಲ ಆಧ್ಯಾತ್ಮಿಕವಾಗಿರದೆ ಇತರ ಹಲವು ಕ್ಷೇತ್ರಗಳನ್ನು ಸಹ ಒಳಗೊಂಡಿದೆ. ಆದ್ದರಿಂದ ಸಮಾಜದಲ್ಲಿ ದೇವಸ್ಥಾನಗಳ ನಿರ್ಮಾಣ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.

ಕುಂಭಾಭಿಷೇಕ ಸಂಪನ್ನ

ಚೇಳೂರು ತಾಲೂಕಿನ ಪಾಳ್ಯಕೆರೆ ಗ್ರಾಮದಲ್ಲಿ ಎರಡು ದಿನಗಳ ಕಾಲ ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ. ಗಣಪತಿ. ಆಂಜನೇಯಸ್ವಾಮಿ. ಗರುಡ. ಗರುಡಸ್ತಂಭ ಮತ್ತು ಗೋಪುರ ಕುಂಭಾಭೀಷೇಕ, ಪ್ರತಿಷ್ಠಾಪನಾ ಮಹೋತ್ಸವವು 16 ಮತ್ತು 17ರಂದು ನೆರವೇರಿತು. ಅಭಿಷೇಕಗಳು. ಹೋಮ. ಹವನಗಳು. ಮಹಾಕುಂಭಾಬೀಷೇಕ. ಪುಷ್ಪಾಲಂಕಾರಗಳು ನಡೆಯಿತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಹಸೀಲ್ದಾರ್ ಶ್ರೀನಿವಾಸಲು ನಾಯ್ಡು, ದಾನಿಗಳು, ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net