ಸಾಮೂಹಿಕ ವಿವಾಹಕ್ಕೆ ದೇಗುಲಗಳ ಹಿಂದೇಟು

Marriage
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೂರು ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲಾಗುವುದು ಎಂದು ಸರ್ಕಾರ ಪ್ರಚಾರ ಮಾಡುತ್ತಿದೆ. ಆದರೆ, ಎರಡು ದೇಗುಲಗಳು ವಿವಾಹ ಕಾರ್ಯ ಮಾಡುವುದಿಲ್ಲ ಎಂದು ಪತ್ರ ಬರೆದಿವೆ.

ಇಡಗುಂಜಿ ದೇವಸ್ಥಾನದ ವಿವಾದ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಯಾವುದೇ ಹೊಸ ಕಾರ್ಯಕ್ಕೆ ಕೋರ್ಟ್ ಅನುಮತಿ ಬೇಕು. ಇದರಿಂದ ನಾವು ವಿವಾಹ ನಡೆಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಧಾರ್ವಿುಕ ದತ್ತಿ ಇಲಾಖೆಗೆ ಪತ್ರ ನೀಡಿದೆ. ಇನ್ನು ಭಟ್ಕಳ ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಸ್ಥಾನ ಕಟ್ಟಡದ ನವೀಕರಣ ನಡೆದಿರುವುದರಿಂದ ವಿವಾಹ ಸಾಧ್ಯವಿಲ್ಲ ಎಂದು ಅಲ್ಲಿನ ಆಡಳಿತ ಮಂಡಳಿಯೂ ಲಿಖಿತವಾಗಿ ತಿಳಿಸಿದೆ.

ಶಿರಸಿ ಮಾರಿಕಾಂಬಾ ದೇವಸ್ಥಾನ ಈ ಬಗ್ಗೆ ಯಾವುದೇ ಉತ್ತರ ನೀಡಿಲ್ಲ. ಒಟ್ಟಿನಲ್ಲಿ ಸರ್ಕಾರದ ಆದೇಶಕ್ಕೆ ದೇವಸ್ಥಾನಗಳು ಸ್ಪಂದಿಸದ ಕಾರಣ ಗೊಂದಲ ಉಂಟಾಗಿದೆ. ಏ.26 ಹಾಗೂ ಮೇ 24 ರಂದು ಧಾರ್ವಿುಕ ದತ್ತಿ ಇಲಾಖೆಯಿಂದ ರಾಜ್ಯಾದ್ಯಂತ 100 ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net