

ಕೆ.ಎಂ.ದೊಡ್ಡಿ : ದೇವಾಲಯಗಳಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಮತ್ತು ಸಮೃದ್ಧಿ ಲಭಿಸಲಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ಮಾರಮ್ಮ ಹಾಗೂ ಪಟ್ಟಲದಮ್ಮ ಮತ್ತು ಶ್ರೀ ಮದ್ದೆನಟ್ಟಿಯಮ್ಮ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಮದನಟ್ಟಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗವಹಿಸಿ ಮಾತನಾಡಿದರು.
ಪ್ರತಿ ಗ್ರಾಮಗಳಲ್ಲಿ ದೇವಾಲಯ ಇದ್ದು ದೇವರ ಉತ್ಸವಕ್ಕೆ ಎಲ್ಲರು ಒಟ್ಟಾಗಿ ಸೇರಿ ಆಚರಿಸುತ್ತಾರೆ. ಗ್ರಾಮಸ್ಥರು ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಅವುಗಳಿಂದ ದೂರ ಉಳಿದು ದೇವರನ್ನು ಪ್ರಾರ್ಥಸಿದರೆ ಗ್ರಾಮಕ್ಕೆ ಒಳಿತಾಗಲಿದೆ ಎಂದು ಕಿವಿ ಮಾತು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ಅರ್ಚಕ ಶಿವನಂಜೇಗೌಡ, ಸಮಿತಿಯ ಅಧ್ಯಕ್ಷ ಎಲ್.ಎನ್. ನಂಜೇಗೌಡ, ಕಾರ್ಯದರ್ಶಿ ಎಲ್.ಕೆ.ಚಿಕ್ಕಮಂಚೇಗೌಡ, ಖಜಾಂಚಿ ಕೃಷ್ಣೇಗೌಡ, ಮುಖಂಡರಾದ ಎಂ. ಮಂಚೇಗೌಡ, ಚಿಕ್ಕೇಗೌಡ ಸೇರಿದಂತೆ ಮತ್ತಿತರಿದ್ದರು.
-------------------
2ಏಒಆ-2
ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಮದನಟ್ಟಿ ದೇವಾಲಯದ ಪ್ರತಿಷ್ಠಾನದ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಕದಲೂರು ಉದಯ್ ಅವರನ್ನು ಅಭಿನಂದಿಸಲಾಯಿತು. ಎ.ಎಸ್. ರಾಜೀವ್, ಅರ್ಚಕ ಶಿವನಂಜೇಗೌಡ, ಎಲ್.ಎನ್. ನಂಜೇಗೌಡ, ಎಲ್.ಕೆ.ಚಿಕ್ಕಮಂಚೇಗೌಡ ಇದ್ದರು.