ದೇವಾಲಯಗಳು ನೆಮ್ಮದಿ ನೀಡುವ ತಾಣಗಳು

ald-1a
Published on

ಆಲ್ದೂರು: ದೇವಸ್ಥಾನಗಳು, ಮಠ ಮಂದಿರಗಳು ಮನುಷ್ಯನ ಬದುಕಿಗೆ ನೆಮ್ಮದಿ ನೀಡುವ ತಾಣವಾಗಿದ್ದು, ಬದುಕಿನ ಜಂಜಾಟದಿಂದ ನೆಮ್ಮದಿ ಪಡೆಯಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಆರದವಳ್ಳಿ ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಳೇಖಾನ್ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಮರು ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ 48ದಿನಗಳ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಸನಾತನ ಧರ್ಮದ ಆದಿ ಯಾವುದು ಎಂದು ತಿಳಿದಿಲ್ಲ. ಇಷ್ಟೇ ವರ್ಷಗಳ ಹಿಂದೆ ಈ ಸನಾತನ ಧರ್ಮ ಉದಯವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಹಲವು ಧರ್ಮಗಳಿಗೆ ಆದು ಹುಟ್ಟಿದ ಕಾಲಮಾನಗಳು ಪುರಾವೆಗಳಲ್ಲಿ ದೊರೆತಿವೆ. ಆದರೆ ಸನಾತನ ಧರ್ಮ ಆದಿಯೂ ಇಲ್ಲದ ಅಂತ್ಯವೂ ಇಲ್ಲದ ಶ್ರೇಷ್ಠ ಧರ್ಮ. ಶತಶತ ಮಾನಗಳಿಂದ ಹಲವು ದಾಳಿಗಳನ್ನು ಎದರಿಸಿಯೂ ನಮ್ಮ ಸನಾತನ ಧರ್ಮ ಗಟ್ಟಿಯಾಗಿ ಬೇರೂರಿದೆ ಎಂದರೆ ಆದು ಆ ಧರ್ಮಕ್ಕೆ ಇರುವ ಶಕ್ತಿಯನ್ನು ತೋರಿಸುತ್ತದೆ ಎಂದರು.

ಕೋಶಾಧ್ಯಕ್ಷ ಮಲ್ಲಿಕಾರ್ಜನಯ್ಯ, ಪ್ರಧಾನ ಕಾರ್ಯದರ್ಶಿ ಸದಾಶಿವಯ್ಯ, ಸದಸ್ಯರಾದ ಗಂಗಾಧರಯ್ಯ, ಕುಮಾರ್, ಮಲ್ಲೇಶ್, ಶಿವಾನಂದ, ಧರ್ಮರಾಜ್ , ರಮೇಶ್, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net