ಗ್ರಾಮದ ಸಮಗ್ರ ಅಭಿವೃದ್ಧಿಗೆ ದೇಗುಲಗಳು ಪೂರಕ

kls1
Published on

ಕಳಸ: ಊರಿನ ಎಲ್ಲ ಹಾಗೂ ಹೋಗುಗಳು, ಊರಿನ ಸರ್ವಾಂಗೀಣಾ ಬೆಳವಣಿಗೆಯ ವಿಚಾರಗಳಿಗೆ, ನಮ್ಮ ಹಿರಿಯರು ಹಾಕಿಕೊಟ್ಟ ಬಹುದೊಡ್ಡ ಸಂಪತ್ತು ದೇವಾಲಯಗಳು ಎಂದು ಹೊರನಾಡು ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.

ಮರಸಣಿಗೆಯ ಶ್ರೀಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆ ನಮ್ಮನ್ನು, ನಮ್ಮ ಸಂಸಾರ ಮತ್ತು ಬದುಕನ್ನು ಎಲ್ಲಾ ರೀತಿಯಲ್ಲೂ ನಡೆಸಿಕೊಂಡು ಹೋಗುವುದಕ್ಕೆ ಶಕ್ತಿ ಕೊಡುತ್ತದೆ ಎಂದು ಹೇಳಿದರು.

ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಗ್ರಾಮದ ಜನರು ಒಂದು ಕಡೆ ಸೇರಿ ಒಂದು ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ, ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡು ಸೌಹಾರ್ದವಾಗಿ ಬದುಕು ನಡೆಸಲು ನಮ್ಮ ಪೂರ್ವಿಕರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ದೇವಸ್ಥಾನಗಳ ಮೂಲಕ ನಾವು ಒಳ್ಳೆಯ ಆಚಾರ-ವಿಚಾರ, ಉತ್ತಮ ಸಹಬಾಳ್ವೆ, ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಘುನಾಥ್, ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ, ಮರಸಣಿಗೆ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಖಜಾಂಚಿ ಎ.ಸಿ.ಮಹೇಂದ್ರ ಗೌಡ, ವಸಂತ್ ಹೆಬ್ಬಾರ್, ಕಾರ್ಯದರ್ಶಿ ಕೃಷ್ಣೇ ಗೌಡ, ಸಂತೋಷ್, ವಿಶ್ವನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net