ಮುದ್ದೇಬಿಹಾಳದಲ್ಲಿ ನ್ಯಾಯಾಧೀಶರಿಂದ ದೇಗುಲ ದರ್ಶನ

Temple visit by Judge at Muddebihal
ಮುದ್ದೇಬಿಹಾಳ ಪಟ್ಟಣದಲ್ಲಿನ ಪಾರ್ಶ್ವನಾಥ ತೀರ್ಥಂಕರರ ದೇಗುಲಕ್ಕೆ ಹೈಕೋರ್ಟ್​ ನ್ಯಾಯಮೂರ್ತಿ ಎಂ.ಐ.ಅರುಣ ಅವರು ಭೇಟಿ ನೀಡಿ ದರ್ಶನ ಪಡೆದರು. ನ್ಯಾಯಾ-ಧೀಶರಾದ ಶಿವಾಜಿ ನಲವಡೆ ಹಾಗೂ ಅರವಿಂದ ಹಾಗರಗಿ, ರವೀಂದ್ರಕುಮಾರ ಕಟ್ಟಿಮನಿ, ಸಂಪತ್ತಕುಮಾರ ಬಳೂಲಗಿಡದ, ಮಲ್ಲಿಕಾರ್ಜುನ ಅಂಬಲಿ, ಎಸ್​.ಎಸ್​.ಮಾಲಗತ್ತಿ, ಮಹಾವೀರ ಸಗರಿ ಇತರರಿದ್ದರು.
Published on

ಮುದ್ದೇಬಿಹಾಳ: ಪಟ್ಟಣದ ಹೊರವಲಯದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ 1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಹಾಗೂ ಗುಡ್ಡದ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರೂ ಆಗಿರುವ ರಾಜ್ಯ ಹೈಕೋರ್ಟ್​ ನ್ಯಾಯಮೂರ್ತಿ ಎಂ.ಐ.ಅರುಣ ಅವರು ಭಾನುವಾರ ಸಂಜೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.

ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ ಗಮನಿಸಿ ತರಿಂದ ತಿಳಿದುಕೊಂಡರು. ದೂರದ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತ ಶಿಣ ಸಂಸ್ಥೆ ಆವರಣದಲ್ಲಿರುವ ಪ್ರಥಮ ಮೋಗಾಮಿ 1008 ಭಗವಾನ ಬಾಹುಬಲಿಸ್ವಾಮಿ ಹಾಗೂ ಪ್ರಥಮ ತೀರ್ಥಂಕರ 1008 ಆದಿನಾಥ ಭಗವಾನರ ದರ್ಶನವನ್ನು ದೇವಸ್ಥಾನದಿಂದಲೇ ಪಡೆದುಕೊಂಡರು.

ಜೈನ ಸಮಾಜದ ಮುಖಂಡ, ಅರಿಹಂತ ಚಾರಿಟಬಲ್​ ಟ್ರಸ್ಟ್​ ಅಧ್ಯ ಮಹಾವೀರ ಸಗರಿ ಅವರು ಗುಡ್ಡದ ಪದ್ಮಾವತಿ ಅಮ್ಮನವರ ಐತಿಹ್ಯ ವಿವರಿಸಿ ಹಿಂದೆ ಇದ್ದ ಇಬ್ಬರು ನ್ಯಾಯಮೂರ್ತಿಗಳು ಇಲ್ಲಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ನ್ಯಾಯ ನಿಷ್ಠುರಿ, ಅಹಿಂಸಾ ಪರಮೋಧರ್ಮ ತತ್ವವನ್ನು ಜೀವನದಲ್ಲಿ ಅಳವಡಿಸಕೊಂಡಿರುವ ನ್ಯಾ.ಅರುಣ ಅವರು ಭವಿಷ್ಯದಲ್ಲಿ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾಗಲಿ ಎಂದು ದೇವಸ್ಥಾನದ ಅರ್ಚಕರ ಮುಖಾಂತರ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಹೈಕೋರ್ಟ್​ ನ್ಯಾಯಮೂರ್ತಿಗಳಾದ ಎಂ.ಐ.ಅರುಣ, ವಿಜಯಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ ಅವರನ್ನು ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿ, ಅರವಿಂದ ಹಾಗರಗಿ, ರವೀಂದ್ರಕುಮಾರ ಕಟ್ಟಿಮನಿ, ಸಂಪತ್ತಕುಮಾರ ಬಳೂಲಗಿಡದ, ನ್ಯಾಯವಾದಿಗಳ ಸಂದ ಅಧ್ಯ ಎಸ್​.ಎಸ್​.ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಎಂ.ಎಚ್​.ಕ್ವಾರಿ, ಜೈನ ಸಮಾಜದ ಮುಖಂಡರಾದ ಅಜಿತ ಗೋಂಗಡಿ, ಅನೀಲಕುಮಾರ ಸಗರಿ, ಭರತೇಶ ಮಂಕಣಿ, ರಾಜು ಪಂಡಿತ, ಆದಪ್ಪ ನಾಗಾವಿ, ಸುನಿತಾ ಸಗರಿ, ನಮ್ರತಾ ಸಗರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net