ದೇವಸ್ಥಾನ ಗೋಪುರದ ಕಳಸಾರೋಹಣ ಏ. 28ರಿಂದ

lxr ELU MAKKALA TAYI
Published on

ಲಕ್ಷೆ್ಮೕಶ್ವರ: ಪಟ್ಟಣದ ಏಳು ಮಕ್ಕಳ ತಾಯಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ದೇವಸ್ಥಾನದ ಜಾತ್ರಾ ಸಮಾರಂಭ ಮತ್ತು ಶ್ರೀ ಡೋಹರ ಕಕ್ಕಯ್ಯನವರ ಜಯಂತ್ಯುತ್ಸವ ಏ. 28 ಮತ್ತು ಏ. 29ರಂದು ನಡೆಯಲಿದೆ ಎಂದು ದೇವಸ್ಥಾನದ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಪೂರ್ಣಾಜೆಪ್ಪ ಖರಾಟೆ ತಿಳಿಸಿದರು.

ಅವರು ಶುಕ್ರವಾರ ಜಾತ್ರಾಮಹೋತ್ಸವ ಹಿನ್ನೆಲೆ ಕರೆದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಿನ್ನೆಲೆ ಏ. 28ರಂದು ಬೆಳಗ್ಗೆ 9 ರಿಂದ ಶ್ರೀ ಪೇಟೆ ಆಂಜನೇಯ ದೇವಸ್ಥಾನದ ಕಳಸದಿಂದ ಕಳಸದ ಮೆರವಣಿಗೆ, ಲಕ್ಷೆ್ಮೕಶ್ವರ ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರ ಅಮೃತ ಹಸ್ತದಿಂದ ಕಳಸಾರೋಹಣ ನೆರವೇರುವುದು. ಸಂಜೆ 4ಕ್ಕೆ ರಂಗೋಲಿ ಸ್ಪರ್ಧೆ ಹಾಗೂ ಸಂಜೆ 6ಕ್ಕೆ ಮನರಂಜನೆ ಕಾರ್ಯಕ್ರಮ ನಡೆಯಲಿದೆ.

ಏ. 29ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಏಳು ಮಕ್ಕಳ ತಾಯಿಗೆ ರುದ್ರಾಭಿಷೇಕ, ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.

ಬೀರವಳ್ಳಿ ಗುರುದೇವ ತಪೋವನದ ಪೀಠಾಧ್ಯಕ್ಷೆ ಗುರು ಮಾತಾಜಿ ನಂದಾತಾಯಿ ಉಪಸ್ಥಿತರಿರುವರು. ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಪೂರ್ಣಾಜೆಪ್ಪ ಖರಾಟೆ ಅಧ್ಯಕ್ಷತೆ ವಹಿಸುವರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಮಾಡಿದ ಹಾಗೂ ಸಮಾಜದ ರಾಜ್ಯ ಪದಾಧಿಕಾರಿಗಳಿಗೆ ಸನ್ಮಾನ ನಡೆಯಲಿದೆ ಎಂದರು. ಎನ್.ಆರ್. ಸಾತಪುತೆ, ಸತೀಶ ನಾರಾಯಣಕರ, ಲಕ್ಷ್ಮೀಕಾಂತ ಕರಾಟೆ, ಕಪ್ಪದಸ್ವಾಮಿ ಕರಾಟೆ, ಮಂಜುನಾಥ ಗಜಾಕೋಶ, ರಾಜು ಕರಾಟೆ, ಮಂಜುನಾಥ ಗಜಾಕೋಶ, ಕಿರಣ ಕರಾಟೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net