ಸುಳ್ಯದಲ್ಲಿ ಗಾಳಿಗೆ ಹಾರಿದ ದೇವಸ್ಥಾನದ ಹೆಂಚು

Sul_Kamba
Published on

ಸುಳ್ಯ: ಮಂಗಳವಾರ ಸಂಜೆ ಸುರಿದ ಮಳೆ ಹಾಗೂ ಭಾರಿ ಗಾಳಿಗೆ ತಾಲೂಕಿನ ಹಲವೆಡೆ ಹಾನಿ ಸಂಭವಿಸಿರುವುದು ವರದಿಯಾಗಿದೆ. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೆಗೆ ಹಾಕಿದ್ದ ಶಾಮಿಯಾನ ಮಗುಚಿ ಬಿದ್ದು ಹರಿದು ಹೋಗಿ ಕಬ್ಬಿಣದ ಪೈಪ್‌ಗಳಿಗೆ ಸಹ ಹಾನಿಯಾಗಿದೆ. ಅಲ್ಲದೆ ದೇವಸ್ಥಾನದ ಕಟ್ಟಡದ ಹೆಂಚು ಹಾರಿ ಹಾನಿಯುಂಟಾಗಿದ್ದು ಅದನ್ನು ರಾತ್ರಿಯೇ ಸ್ಥಳೀಯರು ದುರಸ್ತಿ ಮಾಡಿ ಕ್ಷೇತ್ರದ ಪ್ರಾಂಗಣ ಶುಚಿಗೊಳಿಸಿದ್ದಾರೆ. ಸುಳ್ಯಕ್ಕೆ ವಿದ್ಯುತ್ ಸರಬರಾಜು ಆಗುವ ಲೈನ್ ಮೇಲೆ ಅಮ್ಮಿನಡ್ಕ, ಪಂಜಿಗುಂಡಿ ಹಾಗೂ ದೊಡ್ಡೇರಿಯಲ್ಲಿ ಮರ ಮುರಿದು ಬಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಮರ್ಕಂಜದ ದಾಸರಬೈಲು ಶಾಲಾ ಬಳಿ ಮರವೊಂದು ಬಿದ್ದು ಶಾಲಾ ಕಾಂಪೌಂಡಿಗೆ ಹಾನಿ ಉಂಟಾಗಿದೆ. ಅಲ್ಲದೆ ವಿದ್ಯುತ್ ಕಂಬ ಕೂಡಾ ಉರುಳಿ ಬಿದ್ದಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net