

ವಿಜಯವಾಣಿ ಸುದ್ದಿಜಾಲ ಮಧುರೆ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕನಸವಾಡಿಯ ಶ್ರೀ ಶನಿಮಹಾತ್ಮ ದೇಗುಲದಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮಾಂತರ ಜಿಲ್ಲೆಯಲ್ಲಿಯೇ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಶನಿಮಹಾತ್ಮ ದೇಗುಲದ ಆವರಣದಲ್ಲಿ ದೇವರ ದರ್ಶನಕ್ಕೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಜಮಾಯಿಸಿದ್ದರು. ಗ್ರಾಮಾಂತರ ಜಿಲ್ಲೆಯಲ್ಲೆ ನೆರೆಯ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಕೊನೆಯ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಶನಿಮಹಾತ್ಮ ದೇಗುಲವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರಾವಣ ಮಾಸದ ಕೊನೆಯ ಶನಿವಾರ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಕೊನೆಯ ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೂ ಶನಿಮಹಾತ್ಮ ಸ್ವಾಮಿಗೆ ತೈಲಾಭಿಷೇಕ ಪಂಚಾಮೃತ ಅಭಿಷೇಕ ನಡೆಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಶನಿವಾರದಂದು ಭಕ್ತರ ದಂಡು: ವರ್ಷ ವರ್ಷ ನಡೆಯುವ ಶನಿದೇವರ ರಥೋತ್ಸವ ಬಹಳ ಪ್ರಖ್ಯಾತಿ ಪಡೆದಿದೆ. ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಉತ್ಸವದ ಸಮಯದಲ್ಲಿ, ಶನಿ ದೇವರನ್ನು ದೇವಸ್ಥಾನದಿಂದ ಹೊರಗೆ ಕರೆದಂತು ಪ್ರದಕ್ಷಣೆ ಮಾಡಲಾಗುತ್ತದೆ. ಶ್ರೀ ಶನಿಮಹತ್ಮಾ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ನೆರವೇರುತ್ತದೆ. ವಾರ್ಷಿಕ ಉತ್ಸವದ ಹೊರತಾಗಿ, ಶನಿ ದೇವರಿಗೆ ಮಹತ್ವದ ದಿನವಾದ್ದರಿಂದ ದೇವಸ್ಥಾನವು ಸಾಮಾನ್ಯವಾಗಿ ಶನಿವಾರದಲ್ಲಿ ಹೆಚ್ಚು ಭಕ್ತರು ಜಮಾವಣೆಯಾಗುತ್ತಾರೆ, ಅದರಲ್ಲೂ ಶ್ರಾವಣ ಶನಿವಾರಗಳಂದು ಭಕ್ತರ ದಂಡು ಇಮ್ಮಡಿಯಾಗಿರುತ್ತದೆ.
ಪ್ರಸಾದ ವಿನಿಯೋಗ:
--