ಬೆನಕನಹಳ್ಳ ದೇಗುಲದಲ್ಲಿ ವಿಶೇಷ ಪೂಜೆ

yaddalahalli
ತೂಬಗೆರೆ ಹೋಬಳಿ ಬೆನಕನಹಳ್ಳ ದೇಗುಲದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಯದ್ದಲಹಳ್ಳಿ ಸಮೀಪವಿರುವ ಬೆನಕನಹಳ್ಳ ಶ್ರೀ ಬೆನಕಪ್ಪ ಸ್ವಾಮಿ ದೇವಸ್ಥಾನ ಹಾಗೂ ಶನಿಮಹಾತ್ಮ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶನಿಶಾಂತಿ, ನವಗ್ರಹ ಹೋಮ-ಹವನ ಸೇರಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇಗುಲದ ಆವರಣದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರ ಇಷ್ಟಾರ್ಥಗಳು ಈಡೇರಲಿ, ಕಷ್ಟ ಕಾರ್ಪಣ್ಯಗಳು ದೂರವಾಗಲಿ, ನಾಡಿಗೆ ಉತ್ತಮ ಮಳೆ ಬೆಳೆಯಾಗಲಿ ಎಂದು ದೇಗುಲದಲ್ಲಿ ಪ್ರಾರ್ಥಿಸಲಾಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.ಆಷಾಢ ಮಾಸದ ಕೊನೆಯ ಶುಕ್ರವಾರ ಮೈಸೂರಿನ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ಹಾಗೂ ಅರ್ಚನೆ ಮಾಡಿಸಿ ತಂದ ಕುಂಕುಮ, ಕರಿಮಣಿ ಹಾಗೂ ಅಕ್ಷತೆಯನ್ನು ಪ್ರಸಾದ ರೂಪದಲ್ಲಿ ಸುಮಂಗಲಿಯರಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net