ಶ್ರದ್ಧಾ-ಭಕ್ತಿಯ ಗುಡಿ ಪ್ರತಿಷ್ಠಾಪನಾ ಪೂಜಾ ಕೈಂಕರ್ಯ

14Kush02
ಕುಶಾಲನಗರದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿರುವ ವೀರಭದ್ರ ಸ್ವಾಮಿಯ ಗುಡಿ ಪ್ರತಿಷ್ಠಾಪಕಾ ಕಾರ್ಯ ಅಂಗವಾಗಿ ಕಾವೇರಿ ನದಿಗೆ ಪೂಜೆ ಸಲ್ಲಿಸಿದ ಬಳಿಕ ಹೆಣ್ಣು ಮಕ್ಕಳು ಕಳಶ ಹೊತ್ತು ದೇವಸ್ಥಾನಕ್ಕೆ ಬರುತ್ತಿರುವುದು. ರಾಜೇಶ್, ಸೋಮಶೇಖರ್, ರಾಖಿ, ಪದ್ಮಾ ಮಹೇಶ್, ಯತಿರಾಜ್ ಇತರರು ಇದ್ದರು.
Published on

ಕುಶಾಲನಗರ: ಇಲ್ಲಿನ ರಥಬೀದಿಯಲ್ಲಿರುವ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿರುವ ವೀರಭದ್ರ ಸ್ವಾಮಿಯ ಗುಡಿ ಪ್ರತಿಷ್ಠಾಪನಾ ಪೂಜಾ ಕೈಂಕರ್ಯಗಳು ಬುಧವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ದೇವಾಂಗ ಸಮಿತಿ ಅಧ್ಯಕ್ಷ ಡಿ.ವಿ.ರಾಜೇಶ್ ನೇತೃತ್ವದಲ್ಲಿ ಕಾವೇರಿ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿದ ಬಳಿಕ ಕಳಸ ಮೆರವಣಿಗೆ ಮತ್ತು ಮಂಗಳವಾದ್ಯಗಳೊಂದಿಗೆ ದೇವಾಲಯ ಆವರಣ ಪ್ರವೇಶಿಸಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಭಟ್ ಮತ್ತು ಶೃಂಗೇರಿಯ ಫಣಿತ್ ತಂಡ ಗಣೇಶ ಪೂಜಾ, ಪುಣ್ಯಾಹವಾಚನ, ವಾಸ್ತು ಹೋಮ, ದಿಗ್ಬಲಿ, ಕಳಶ ಸ್ಥಾಪನೆ, ಶ್ರೀ ದೇವರ ಪ್ರತಿಷ್ಠಾಪನೆ, ತತ್ವಾಧಿಮಾಸ ಹೋಮ, ದುರ್ಗಾ ಹೋಮ, ಕಳಶ ಅಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆಸಿಕೊಟ್ಟಿತು.

ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿ ಉಪಾಧ್ಯಕ್ಷ ಡಿ.ಆರ್.ಸೋಮಶೇಖರ್, ಡಿ.ವಿ. ಚಂದ್ರು, ಪ್ರಧಾನ ಕಾರ್ಯದರ್ಶಿ ಡಿ.ಆರ್.ಕೃಷ್ಣಕುಮಾರ್, ಖಜಾಂಚಿ ಡಿ.ಜಿ.ಪ್ರದೀಪ್, ಸಹ ಕಾರ್ಯದರ್ಶಿ ಡಿ.ವಿ.ಚಂದ್ರಶೇಖರ, ಸಂಘಟನಾ ಕಾರ್ಯದರ್ಶಿ ಡಿ.ವಿ.ವಿನೋದ್, ಗೌರವ ಸಲಹೆಗಾರರಾದ ಡಿ.ಎಸ್.ಜಗದೀಶ್, ಡಿ.ಕೆ.ತಿಮ್ಮಪ್ಪ, ಡಿ.ಟಿ.ನಾಗೇಂದ್ರ, ಕೆ.ಎಸ್.ಮೇಘರಾಜ್, ಡಿ.ಸಿ.ಜಗದೀಶ್, ಸಂಚಾಲಕ ಶಶಿ, ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾ ಮಹೇಶ್, ಯುವಕ ಸಂಘದ ಅಧ್ಯಕ್ಷ ಯತಿರಾಜ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net