ಸಾಮರಸ್ಯದ ನೆಲೆ ದೇವಾಲಯ

BHOOMIPOOJE IN YALLAPURA
Published on

ಯಲ್ಲಾಪುರ: ದೇವಾಲಯವೆಂದರೆ ಕೇವಲ ಶ್ರದ್ಧಾ-ಭಕ್ತಿಗಳ ಕೇಂದ್ರವಲ್ಲ. ಗ್ರಾಮಸ್ಥರ ಸಂಘಟನೆಗೆ ಮತ್ತು ಪರಸ್ಪರ ಸಾಮರಸ್ಯದ ನೆಲೆಯಾಗಿ, ಜನರ ಮನಸ್ಸನ್ನು ಉತ್ತಮ ವಿಚಾರಗಳತ್ತ ಕೊಂಡೊಯ್ಯುವ ತಾಣಗಳಾಗಿರುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ತಾಲೂಕಿನ ಚಿಪಗೇರಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿದ್ದಾಗ ಕೋಟ ಶ್ರೀನಿವಾಸ ಪೂಜಾರಿ ಅವರು ನೀಡಿದ 5 ಲಕ್ಷ ರೂ. ಅನುದಾನದಿಂದ ನಿರ್ವಿುಸಲಾದ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಷತ್ ಸದಸ್ಯರಾಗಿದ್ದಾಗ ಸಿ.ಪಿ.ಯೋಗೇಶ್ವರ ನೀಡಿದ 5 ಲಕ್ಷ ರೂ. ಅನುದಾನದಿಂದ ನಿರ್ವಿುಸಲಾಗುವ ಅಡುಗೆ ಕೋಣೆಯ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿದರು.

ದೇವಸ್ಥಾನದ ಅಧ್ಯಕ್ಷ ವಸಂತ ಹೆಗಡೆ, ಹಿರಿಯರಾದ ಪುರುಷೋತ್ತಮ ಹೆಗಡೆ, ಗುತ್ತಿಗೆದಾರ ವೀರಪ್ಪ, ಮಾಜಿ ಗ್ರಾ.ಪಂ. ಸದಸ್ಯ ರಾಮಲಿಂಗ ಸಾಳುಂಕೆ, ಊರಿನ ಪ್ರಮುಖರಾದ ಎಂ.ಕೆ.ಹೆಗಡೆ, ಮಹಾಬಲೇಶ್ವರ ಹೆಗಡೆ, ಗಿರಿರಾಜು ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net