ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ

MAHESH NEW
Published on

ಹುಬ್ಬಳ್ಳಿ : ಶಾಸಕರ ಸ್ಥಳೀಯ ಪ್ರದೇಶ ದೇವಸ್ಥಾನಗಳ ಅಭಿವೃದ್ದಿಗಾಗಿ ಮುಜರಾಯಿ ಮತ್ತು ಧಾರ್ವಿುಕ ದತ್ತಿ ಇಲಾಖೆಯ ಅನುದಾನದಡಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 52ರ ಜಗದೀಶ ನಗರದ ಶ್ರೀ ಅಂಬಾಭವಾನಿ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನದ ಜೀಣೋದ್ಧ್ದಾರಕ್ಕಾಗಿ 13.5 ಲಕ್ಷ ರೂ.ಗಳ ಚೆಕ್ ಅನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ದೇವಸ್ಥಾನದ ಕಮಿಟಿಗಳಿಗೆ ಶನಿವಾರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಜನರ ಕೆಲಸಗಳನ್ನು ಮಾಡುವುದೇ ನನ್ನ ಧ್ಯೇಯ ಮತ್ತು ಉದ್ದೇಶ ಎಂದರು.

ಹಿಂದಿನ ಶಾಸಕರಂತೆ ಕೇವಲ ಭೂಮಿಪೂಜೆ ಮಾಡಿ, ಮನೆಯಲ್ಲಿ ಕುಳಿತುಕೊಳ್ಳುವ ಕೆಲಸ ಮಾಡುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ. ಈಗಾಗಲೇ 10 ರಿಂದ 12 ವಾರ್ಡ್​ಗಳ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರ್ಚಚಿಸಿದ್ದಾಗಿ ತಿಳಿಸಿದರು.

ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ತಹಶೀಲ್ದಾರ ಕಲ್ಲಗೌಡ ಪಾಟೀಲ, ಪ್ರಮುಖರಾದ ಸುಭಾಷಸಿಂಗ್ ಜಮಾದಾರ, ಬಸವರಾಜ ಕಟ್ಟಿಮನಿ, ಅಶೋಕ ಕಟ್ಟಿಮನಿ, ಹರೀಶ ಜಂಗ್ಲಿ, ಕಿಶನ ಬಿಲಾನಾ, ಗೀತಾ ಮುದ್ದಿ, ಕಾಂಚನಾ ಸಿಂದೋಗಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net