ದೇವಸ್ಥಾನ ಜೀಣೋದ್ಧಾರ ಕಾರ್ಯಕ್ರಮ ನಾಳೆಯಿಂದ

devastana
Published on

ಹುಬ್ಬಳ್ಳಿ: ಸಿದ್ದಲಿಂಗೇಶ್ವರ ಸೇವಾ ಸಂಘದ ವತಿಯಿಂದ ಇಲ್ಲಿನ ತಿಮ್ಮಸಾಗರ ಓಣಿಯ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ ಜೀಣೋದ್ಧಾರ ನಿಮಿತ್ತ ನ.22 ರಿಂದ 24 ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚನ್ನಬಸಪ್ಪ ಕಲ್ಲೂರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ಮಹಾಗಣಪತಿ ಹಾಗೂ ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.

22ರಂದು ಬೆಳಗ್ಗೆ 8ಕ್ಕೆ ಮೂರುಸಾವಿರ ಮಠದಿಂದ ಪೂರ್ಣಕುಂಭ ಹಾಗೂ ಸಕಲ ವಾದ್ಯ ಮೇಳಗಳೊಂದಿಗೆ ಮಹಾಗಣಪತಿ ಹಾಗೂ ನಾಗದೇವರ ಮೂರ್ತಿಗಳ ಮೆರವಣಿಗೆ, ಪುರಪ್ರವೇಶ ನಡೆಯಲಿದೆ. ಸಂಜೆ 6ಕ್ಕೆ ಧಾರ್ವಿುಕ ಹಾಗೂ ಸಾಂಸ್ಕೃತಿಕ ಸಭೆ ಮತ್ತು ದಾನಿಗಳಿಗೆ ಸತ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ್, ಪ್ರದೀಪ ಶೆಟ್ಟರ್, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಎಂ.ಆರ್. ಪಾಟೀಲ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಉದ್ಯಮಿಗಳಾದ ಡಾ. ರಮೇಶ ಮಹಾದೇವಪ್ಪನವರ, ಸಂತೋಷ ವೆರ್ಣೆಕರ ಪಾಲ್ಗೊಳ್ಳುವರು ಎಂದರು.

23ರಂದು ಬೆಳಗ್ಗೆ 8ಕ್ಕೆ ಮಹಾಗಣಪತಿ ಹಾಗೂ ನಾಗದೇವರ ಧಾನ್ಯಾಧಿವಾಸ, ಜಲಾಧಿವಾಸ, ಶೈಯಾಧಿವಾಸ, ಹೋಮಗಳು ಜರುಗಲಿವೆ. ಸಂಜೆ 6ಕ್ಕೆ ಧಾರ್ವಿುಕ ಹಾಗೂ ಸಾಂಸ್ಕೃತಿಕ ಸಭೆ ಮತ್ತು ದಾನಿಗಳಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಕಾರ್ವಿುಕ ಸಚಿವ ಸಂತೋಷ ಲಾಡ್, ಶಾಸಕ ಅರವಿಂದ ಬೆಲ್ಲದ, ಕೆಎಲ್​ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವೀರಣ್ಣ ಕಲ್ಲೂರ, ಜಯತೀರ್ಥ ಕಟ್ಟಿ, ನಾಗರಾಜ ಗೌರಿ, ಪ್ರೀತಿ ಖೋಡೆ ಪಾಲ್ಗೊಳ್ಳಲಿದ್ದು, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.

24ರಂದು ಬ್ರಾಹ್ಮಿ ಮೂಹೂರ್ತದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ, ಮಹಾಗಣಪತಿ ಹಾಗೂ ನಾಗದೇವರ ಮಹಾ ರುದ್ರಾಭಿಷೇಕ, ಗಣ ಹೋಮ, ಪ್ರಧಾನ ಹೋಮ, ಪ್ರಾಯಶ್ಚಿತ ಹೋಮ ಮತ್ತು ಕೂಡಲ ಗುರುನಂಜೇಶ್ವರ ಮಠದ ಬ್ರಹ್ಮಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪೂರ್ಣಾಹುತಿ, ಮಹಾಗಣಪತಿ ಮತ್ತು ನಾಗದೇವರ ಜೀವಾತ್ಮ ಪ್ರಾಣ ಪ್ರತಿಷ್ಠಾಪನೆ ಮತ್ತು ನೇತ್ರೋನ್ನು ಮಿಲನ, ಅಷ್ಟೋತ್ತರ, ಪಾದಪೂಜೆ ಮತ್ತು ಮಹಾಮಂಗಳಾರತಿ ಜರುಗಲಿವೆ ಎಂದರು.

ಸಂಜೆ 6ಕ್ಕೆ ಧಾರ್ವಿುಕ ಹಾಗೂ ಸಾಂಸ್ಕೃತಿಕ ಸಭೆ ಮತ್ತು ದಾನಿಗಳಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಈಶ್ವರಪ್ಪ ಶಿರಕೋಳ, ಶಿವು ಮೆಣಸಿನಕಾಯಿ, ಬಸವರಾಜ ಕುಂದಗೋಳಮಠ ಪಾಲ್ಗೊಳ್ಳುವರು. ಮಣಕವಾಡ ದೇವಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೂರು ದಿನಗಳ ಕಾಲ ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ಜರುಗಲಿದೆ ಎಂದರು.

ಪ್ರಮುಖರಾದ ಮುತ್ತಣ್ಣ ಮೀಸಿ, ಮಂಜುನಾಥ ಕಲ್ಲೂರ, ಬಸವರಾಜ ಕಲ್ಲೂರ, ವಿನಯ ಸಜ್ಜನ, ಕುಬೇರಸಾ ಹಬೀಬ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net