ಪುತ್ತೂರು ದೇವಳಕ್ಕೆ ಸೇರಿದ ಜಾಗ ಸ್ವಾಧೀನ -  ೨೫ ಕೋಟಿಗೂ ಅಧಿಕ ಮೌಲ್ಯದ ಭೂಮಿ ದೇವಸ್ಥಾನದ ವಶ

PTR_17 JUL_2
Published on

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಮುಂದುವರಿದಿದ್ದು, ಗುರುವಾರ ತೆಂಕಿಲದಲ್ಲಿ ೧ ಎಕರೆಯಷ್ಟು ಜಾಗವನ್ನು ಮರಳಿ ಪಡೆದುಕೊಳ್ಳಲಾಯಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಸಮಿತಿ ಅಧಿಕಾರ ಸ್ವೀಕರಿಸಿ, ೬ ತಿಂಗಳಾಗುತ್ತಾ ಬಂದಿದ್ದು, ೨೫ ಕೋಟಿಗೂ ಅಧಿಕ ಮೌಲ್ಯದ ಭೂಮಿ ದೇವಸ್ಥಾನದ ವಶವಾಗಿದೆ. ದೇವಾಲಯದ ಜಾಗವನ್ನು ಮಾತುಕತೆ ನಡೆಸುವ ಮೂಲಕ ಹಿಂಪಡೆಯುವ ಕಾರ್ಯ ಮಾಡಲಾಗುತ್ತಿದೆ. ಕೆಲವರು ಸಮಯಾವಕಾಶ ಕೇಳಿದ್ದು, ಅದನ್ನು ನೀಡಲಾಗಿದೆ. ದೇವಸ್ಥಾನದ ಜಾಗಗಳಲ್ಲಿ ಕುಟುಂಬದ ದೈವ ದೇವರಿಗೆ ಗುಡಿಗಳನ್ನು ಕಟ್ಟುವುದಕ್ಕೆ ಅವಕಾಶವಿಲ್ಲ ಎಂದರು.

ತೆಂಕಿಲ ಅಂಗನವಾಡಿ ಸಮೀಪ ಎರಡು ನಿವೇಶನ ಹಾಗೂ ತೆಂಕಿಲ ಕಮ್ನಾರು ಕಾಲನಿ ಹೋಗುವ ರಸ್ತೆಯ ಬದಿಯಲ್ಲಿ ಒಂದು ನಿವೇಶನವನ್ನು ಜೆಸಿಬಿ ಮೂಲಕ ಸ್ವಚ್ಛ ಮಾಡಿ, ತಂತಿ ಬೇಲಿ ಅಳವಡಿಸಿ, ದೇವಸ್ಥಾನಕ್ಕೆ ಸೇರಿದ ಜಾಗ ಎಂಬ ಫಲಕ ಅಳವಡಿಸಲಾಯಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ನಗರ ವಲಯ ಅಧ್ಯಕ್ಷ ಲೋಕೇಶ್ ಗೌಡ ಪಡ್ಡಾಯೂರು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮದಾಸ ಗೌಡ, ಕುಂಜಾರು ಶ್ರೀ ಜನಾದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್ ಪೂಜಾರಿ ಮಾವಿನಕಟ್ಟೆ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಕೆ. ವಿ., ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net