ಎಕ್ಕಂಬಿಯಲ್ಲಿ ದೇವಸ್ಥಾನ ಕ್ಷೇತ್ರ ಶುದ್ಧಿ ಕಾರ್ಯಕ್ರಮ

SIRSI MAHASATI
Published on

ಶಿರಸಿ: ತಾಲೂಕಿನ ಎಕ್ಕಂಬಿ ಗ್ರಾಮದಲ್ಲಿ ಶ್ರೀ ಏಕಾಂಬಿಕಾ ಮಹಾಸತಿ ದೇವಸ್ಥಾನದ ಕ್ಷೇತ್ರ ಶುದ್ಧಿ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ನೆರವೇರಿತು.

ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮ ವೇದಮೂರ್ತಿ ಶಂಕರ ಭಟ್ ಅವರ ಪೌರೋಹಿತ್ಯದಲ್ಲಿ ಕ್ಷೇತ್ರ ಶುದ್ಧಿ, ದೋಷ ಉಚ್ಚಾಟನೆ, ದೃಡ ಸಂಪ್ರೋಕ್ಷಣ, ತತ್ವ ಕಲಾನ್ಯಾಸ ಹಾಗೂ ಶಾಂತಿ ಪ್ರಾಯಶ್ಚಿತ್ತ ಹೋಮ ಸೇರಿ ವಿವಿಧ ಧಾರ್ವಿುಕ ವಿಧಿವಿಧಾನಗಳು ನೆರವೇರಿದವು.

ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ದೇವರ ದರ್ಶನ ಪಡೆದರು. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ, ಶ್ರೀದೇವಿಯ ಮಹಾಪೂಜೆಯಲ್ಲಿ ಭಾಗಿಯಾಗಿ ಭಕ್ತಾದಿಗಳೊಂದಿಗೆ ಅನ್ನ ಸಂತರ್ಪಣೆ ಮಾಡಿದರು. ಮಂಗಳ ನಾಯ್ಕ, ಬನವಾಸಿ ವಲಯಾರಣ್ಯಾಧಿಕಾರಿ ಭವ್ಯ ನಾಯ್ಕ, ಪಿಎಸೈ ಸೀತಾರಾಮ ಹಾಗೂ ಬಿಸಲಕೊಪ್ಪ ಗ್ರಾಪಂ ಸದಸ್ಯರು ಸೇರಿ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು, ದೇವಿಯ ದರ್ಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net