

ಕೆ.ಆರ್.ನಗರ : ಪಟ್ಟಣದ ಗಾಂಧಿ ಪಾರ್ಕ್‌ನಲ್ಲಿರುವ ಶ್ರೀ ಕಾಳಿಕಾಂಬಾ ಕಮಠೇಶ್ವರಿ ದೇವಾಲಯದ 20ನೇ ವಾರ್ಷಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಇಲ್ಲಿನ ವಿಶ್ವಕರ್ಮ ಸೇವಾ ಸಮಾಜದ ನಿರ್ಮಾಣ ಮಾಡಲಾಗಿರುವ ಅಮ್ಮನವರ ದೇವಸ್ಥಾನದ ವಾರ್ಷಿಕೋತ್ಸವದ ನಿಮಿತ್ತ ಬೆಳಗ್ಗೆ 8ಕ್ಕೆ ವಿವಿಧ ಅಭಿಷೇಕ ಮತ್ತು ಅಲಂಕಾರ ಮಾಡಿದ್ದು ಭಕ್ತಿ, ಭಾವದ ಪ್ರತೀಕವಾಗಿತ್ತು. ಮಹಾಮಂಗಳಾರತಿ ನಂತರ ಹಲವಾರು ಹೋಮ, ಹವನ ನಡೆಸಲಾಯಿತು. ಮಧ್ಯಾಹ್ನ ನೂರಾರು ಭಕ್ತರಿಗೆ
ಸಾಮೂಹಿಕ ಅನ್ನಸಂತರ್ಪಣೆ ಮಾಡಲಾಯಿತು. ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಈ ಸಂದರ್ಭ ಮಾತನಾಡಿ, ದೇವಾಲಯದ ಇನ್ನಷ್ಟು ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡುವೆ ಎಂದರು. ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ನವ ನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಮಾಜಿ ಸದಸ್ಯ ಕೆ.ಬಿ.ಸುಬ್ರಮಣ್ಯ, ಎಡತೊರೆ ಬಿಇಡಿ ಕಾಲೇಜಿನ ವ್ಯವಸ್ಥಾಪಕ ಲೋಕೇಶ ಭರಣಿ, ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಕೆ.ಎಸ್.ರೇವಣ್ಣ, ಕಾರ್ಯದರ್ಶಿ ಬಿ.ಡಿ.ರೇಣುಕ ಪ್ರಸನ್ನ, ಉಪಾಧ್ಯಕ್ಷ ಎನ್.ರವೀಶ್, ಪದಾಧಿಕಾರಿಗಳಾದ ಪ್ರಸಾದ್, ಸಿ.ವಿ.ಮೋಹನ್‌ಕುಮಾರ್, ಸಿ.ಆರ್.ಗಣೇಶಾಚಾರ್, ಸಿದ್ದಪ್ಪಾಜಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ದಿನೇಶ್, ಕೃಷ್ಣ, ಮುಖಂಡರಾದ ಯೋಗೀಶಾಚಾರ್, ಪುಟ್ಟಸ್ವಾಮಾಚಾರ್, ಲಕ್ಷ್ಮೀಶ, ಸಿ.ಡಿ.ರಾಜಾಚಾರ್, ಪ್ರಕಾಶ್, ನಟಶೇಖರಾಚಾರ್, ಕೆ.ಎನ್. ತುಳಸೀಕುಮಾರ್ ಇತರರು ಇದ್ದರು.