ಕಳಸ: ಮಲೆನಾಡಿನ ಪುಣ್ಯಕ್ಷೇತ್ರ ದಕ್ಷಿಣ ಕಾಶಿ,ಅಗಸ್ತŒ ಕ್ಷೇತ್ರವೆಂದು ಪ್ರಖ್ಯಾತಿಯನ್ನು ಪಡೆದಿರುವ, ಕಲ್ಯಾಣ ಕಲಶೇಶ್ವರವೆಂದೇ ತನ್ನ ನಾಮಾಂಕಿತವನ್ನಿಟ್ಟುಕೊಂಡ ಕಲಶೇಶ್ವರ ಸ್ವಾಮಿಗೆ ನವಂಬರ್ 25 ರಂದು ರಾತ್ರಿ 3 ಗಂಟೆಗೆ ಗಿರಿಜಾಂಬೆಯೊಂದಿಗೆ ಕಲ್ಯಾಣ ಬಾಗ್ಯ.
ನವಂಬರ್ 22ರಂದು ಗಿರಿಜಾ ಕಲ್ಯಾಣದ ಪೂಜಾ ವಿಧಾನ ಆರಂಭಗೊಂಡಿದ್ದು, ಗಣಪತಿ ಪೂಜೆ, ಅಂಕುರಾರ್ಪಣೆ ನಡೆಯಿತು. ನ 23 ರಂದು ಕೌತುಕೋತ್ಸವ ನಡೆಯಿತು.ಮಂಗಳವಾರ ಧ್ವಜಾರೋಹಣ ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಕಾರ್ತಿಕ ದೀಪೋತ್ಸವ ಸುಪ್ರದಕ್ಷಿಣೆ ಸೇವೆಗಳು ನಡೆಯಿತು. ನ 25 ರಂದು ಪ್ರತೀ ವರ್ಷ ನಡೆಯುವ ವಿವಿಧ ಸಾಂಪ್ರಾದಾಯದಂತೆ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.
ಈಗಾಗಲೇ ಗಿರಿಜಾ ಕಲ್ಯಾಣ ನಿಮಿತ್ತ ಕಲಶೇಶ್ವರ ದೇವಸ್ಥಾನವನ್ನು ವಿದ್ಯುದ್ವೀಪ, ತಳಿರು ತೋರಣಗಳಿಂದ ಶೃಂಗರಿಸಲಾಗಿದೆ.ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳಿಗೆ ವಿದ್ಯುದ್ವೀಪಗಳನ್ನು ಅಳವಡಿಸಲಾಗಿದೆ. ಅರ್ಚನೆಗಳು,ಹಣ್ಣು ಕಾಯಿ,ಸೇವೆಗಳು ನಿಯಮಾವಳಿಯಂತೆ ನಡೆಯುತ್ತದೆ.