ದೇವಸ್ಥಾನ ಕಳಸಾರೋಹಣ 28 ರಂದು

DEVARU ANJANEYA (2)
Published on

ದಾವಣಗೆರೆ: ನಗರದ ಚಿಕ್ಕಮ್ಮಣ್ಣಿ ದೇವರಾಜ್ ಅರಸು ಬಡಾವಣೆಯಲ್ಲಿ ಆ. 28ರಂದು ಶ್ರೀ ವರಸಿದ್ಧಿ ವಿನಾಯಕ ಹಾಗೂ ವರಾಂಜನೇಯ ದೇವಸ್ಥಾನದ ಕಳಸಾರೋಹಣ ಮತ್ತು ದೀಪಸ್ತಂಭ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಗಣಪತಿ ಹಾಗೂ ಆಂಜನೇಯ ಸ್ವಾಮಿ ಮಂಗಲಮೂರ್ತಿ ಪಂಚಾಮೃತ ಸಹಿತ ಗಂಗಾಪೂಜೆ, ರುದ್ರಾಭಿಷೇಕ, ಅಷ್ಟೋತ್ತರ ಹಾಗೂ ಸಂಜೀವಿನಿ ಆಂಜನೇಯ ಪವಮಾನಹೋಮ, ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿ ನಡೆಯಲಿವೆ.

ನಂತರ ಬೆಳಗ್ಗೆ 9 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹೆಬ್ಬಾಳ್‌ನ ಶ್ರೀ ಮಹಾಂತ ರುದ್ರೇಶ್ವರ ಶ್ರೀ ಸಾನ್ನಿಧ್ಯ ವಹಿಸಿ ದೀಪಸ್ತಂಭ ಹಾಗೂ ಕಳಸಾರೋಹಣ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net