

ರಾಣೆಬೆನ್ನೂರ: ತಾಲೂಕಿನ ಮೆಣಸಿನಹಾಳ ಗ್ರಾಮದ ದುರ್ಗಾದೇವಿ ದೇವಸ್ಥಾನದ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಹೋದ ಕುರಿತು 13 ಜನರ ವಿರುದ್ಧ ಇಲ್ಲಿಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಳ್ಳಾಪುರ ಗ್ರಾಮದ ಸುರೇಶ ನಿಂಗಪ್ಪ ಸಾಲಗೇರಿ, ನೇತ್ರಾ ಸಾಲಗೇರಿ, ಚಂದ್ರಪ್ಪ ಸಾಲಗೇರಿ, ಸಂತೋಷ ಕಚ್ಚರವಿ ಸೇರಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಗ್ರಾಮದ ಚಾಮರಾಜ ಬಸನಗೌಡ ಪಾಟೀಲ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿತರು ದೇವಸ್ಥಾನಕ್ಕೆ ನುಗ್ಗಿ 1.47 ಲಕ್ಷ ರೂ. ಮೌಲ್ಯದ ಬೆಳ್ಳಿಯ ಚಿನ್ನಾಭರಣ ದೋಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.