ದೇಗುಲ ಮಾನಸಿಕ ನೆಮ್ಮದಿಯ ತಾಣ

17-kkr3(2-25
ಕಿಕ್ಕೇರಿ ಸಮೀಪದ ಭಾರತೀಪುರಕೊಪ್ಪಲು ಗ್ರಾಮದಲ್ಲಿ ಈಚೆಗೆ ಶ್ರೀ ಸಿದ್ಧಿವಿನಾಯಕ ದೇಗುಲ ಲೋಕಾರ್ಪಣೆ ವೇಳೆ ಗಣಪತಿ ಮೂರ್ತಿಗೆ ಮಾಡಲಾಗಿದ್ದ ಪುಷ್ಪಾಲಂಕಾರ.
Published on

 ಕಿಕ್ಕೇರಿ: ನೆಮ್ಮದಿಯ ತಾಣವಾಗಿರುವ ದೇಗುಲ ಪರಂಪರೆ ಯುವಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.

ಸಮೀಪದ ಭಾರತೀಪುರಕೊಪ್ಪಲು ಗ್ರಾಮದಲ್ಲಿ ಈಚೆಗೆ ಲೋಕಾರ್ಪಣೆಗೊಂಡ ಶ್ರೀ ಸಿದ್ಧಿ ವಿನಾಯಕ ನೂತನ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ದೇವಾತ್ಮದ ಮನಸ್ಸು ಮೂಡಲು ದೇವರ ಆರಾಧನೆ ಮುಖ್ಯ. ತಾಮಸಗುಣ ಮರ್ಧನವಾಗಲು ನಿತ್ಯ ಪೂಜಾರಾಧನೆ ಅವಶ್ಯ. ಒತ್ತಡ, ಜಂಜಾಟದಿಂದ ಮುಕ್ತರಾಗಲು, ಆಸೆಗೆ ಅಂಕುಶ ಹಾಕಲು ಭಗವಂತನ ನಂಬಿ ಪೂಜಿಸಬೇಕು ಎಂದರು.

ಸಕಾರಾತ್ಮಕ ಚಿಂತನೆ ಮೂಡಲು ದೇವತಾರಾಧನೆ ಅನುಕೂಲ. ದಾನ, ಧರ್ಮಗಳು ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಪರಂಪರೆಯಾಗಿದ್ದು, ಇವುಗಳನ್ನು ಪಾಲನೆ ಮಾಡಬೇಕಿದೆ. ಊರಿಗೊಂದು ದೇಗುಲ ನೆಮ್ಮದಿಯ ಕೇಂದ್ರವಾಗಲಿದೆ. ದ್ವೇಷಾಸೂಯೆ ದೂರ ಸರಿಸಿ ಎಲ್ಲರನ್ನು ಒಂದೆಡೆ ಸೇರಿಸಲು ದೇಗುಲಗಳು ಪಾತ್ರ ಬಲುದೊಡ್ಡದು ಎಂದು ನುಡಿದರು.

ಸಮಾಜಸೇವಕ ಮೊಟ್ಟೆ ಮಂಜು ಮಾತನಾಡಿದರು. ದೇಗುಲ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಹೋಮ-ಹವನ, ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ಜರುಗಿತು. ಅನ್ನಸರ್ಪಣೆ ಮಾಡಲಾಯಿತು.

ಶ್ರೀ ಗಣೇಶ ವಿಗ್ರಹದ ದಾನಿಗಳಾದ ಸುವರ್ಣ ನಾರಾಯಣಗೌಡ, ದೊಡ್ಡ ಪುಟ್ಟೇಗೌಡ, ಕುಮಾರ್, ಬಲರಾಮ್, ಹರೀಶ್, ಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರು, ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗರಾಜ್, ತಾಲೂಕು ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ ಎಸ್.ಗೌಡ, ಗುತ್ತಿಗೆದಾರ ಮಂಜುನಾಥ್, ಭಾರತೀಪುರ ಕ್ರಾಸ್ ಗ್ರಾಪಂ. ಅಧ್ಯಕ್ಷ ಕುಬೇರ, ಮಾಜಿ ಅಧ್ಯಕ್ಷೆ ಶಶಿಕಲಾ ಕುಮಾರ್, ರುಕ್ಮಿಣಿ ನಾಗೇಶ್, ಶಶಿಕಲಾ ದೇವರಾಜು, ಉದ್ದೆಮಿ ಮಂಜುನಾಥ್, ನಂಜಪ್ಪ, ಬಸವೇಗೌಡ, ಪ್ರದೀಪ್, ಕೊರಟಿಕೆರೆ ಮೋಹನ್, ಯಲಾದಹಳ್ಳಿ ಜಯರಾಮ್, ಕೊರಟಿಕೆರೆ ಮೋಹನ್, ಗಂಗನಹಳ್ಳಿ ಕೆಂಪರಾಜು, ಬಳ್ಳೇಕೆರೆ ಮಂಜೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net