ರಾಣೆಬೆನ್ನೂರ: ನಗರದ ದೊಡ್ಡಪೇಟೆ ಅಂಕಲಕೋಟಿ ಓಣಿಯ ಹುಡೇದ ಚೌಡೇಶ್ವರಿದೇವಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಚೌಡೇಶ್ವರಿ ದೇವಿ ಮೂರ್ತಿ, ನಾಗದೇವತೆ ಹಾಗೂ ದೇವಿ ಪಾದುಕ ಶಿಲಾಮೂರ್ತಿಗಳ ಸ್ಥಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭ ಆ. 22ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.
ಪುರವರ್ಗ ಹಿರೇಮಠ ಆವರಗೊಳ್ಳದ ಓಂಕಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವರು. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.