ಫೆಬ್ರವರಿಯಲ್ಲಿ ದೇವಸ್ಥಾನ ಉದ್ಘಾಟನೆ: ಶಾಸಕ ಎಂ.ಶ್ರೀನಿವಾಸ್ ಹೇಳಿಕೆ

28_11_Mdy_03(Devasthana)
Published on

ಮಂಡ್ಯ: ತಾಲೂಕಿನ ಹನಕೆರೆ ಗ್ರಾಮದಲ್ಲಿ ಕಾಲಭೈರವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಅಭಿವೃದ್ಧಿಗೊಂಡಿರುವ ಕಾಲಭೈರವೇಶ್ವರ ದೇವಸ್ಥಾನದ ಉದ್ಘಾಟನೆ ಸವಾರಂಭ ೆ.8ರಿಂದ 10ರವರೆಗೆ ನಡೆಯಲಿದೆ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.

ಹನಕೆರೆ ಗ್ರಾಮದ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥನಾಥ ಸ್ವಾಮೀಜಿ ದೇವಸ್ಥಾನ ಉದ್ಘಾಟಿಸುವರು. ಅಂದು ಶ್ರೀಗಳನ್ನು ಹನಕೆರೆ ಮುಖ್ಯರಸ್ತೆಯಿಂದ ಮೆರವಣಿಗೆ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮಕ್ಕೆ ಬರವಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಆಹಾರ ಸಮಿತಿ, ದೀಪಾಲಂಕಾರ, ಸ್ಮರಣ ಸಂಚಿಕೆ, ಪ್ರಚಾರ ಸಮಿತಿ, ಸ್ವಚ್ಛತೆ, ಅತಿಥಿಗಳ ಸ್ವಾಗತಕ್ಕೆ ಸಮಿತಿ, ಪೂಜಾ ಕೈಂಕರ್ಯ, ವೇದಿಕೆ ಕಾರ್ಯಕ್ರಮ ಸಮಿತಿ ಸೇರಿದಂತೆ ವಿವಿಧ ಸಮಿತಿಗೆ ಎಲ್ಲರನ್ನೂ ಒಳಗೊಂಡಂತೆ ಕಾರ್ಯಕ್ರಮದ ಯಶಸ್ವಿಗಾಗಿ ಯೋಜನೆ ರೂಪಿಸಲಾಗುವುದು, ಸಮಿತಿಯ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ವಾಡಬೇಕು ಎಂದು ಕೋರಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯ ಎಚ್.ಎನ್. ಯೋಗೇಶ್, ತಾಪಂ ವಾಜಿ ಸದಸ್ಯ ಕಿರಣ್ ಕುವಾರ್, ಗ್ರಾಮದ ಮುಖಂಡರಾದ ಎಚ್.ಬಿ.ರಾಜಣ್ಣ, ಜಯರಾಮು, ಅಶ್ವತ್ಥ್, ಶಶಿಕುವಾರ್, ವಾದಯ್ಯ, ಶಂಕರ್, ಬೋಜಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net