ದೇವಸ್ಥಾನದ ಮೇಲಿಂದ ಬಿದ್ದು ಯುವಕ ಸಾವು

ರಾಮಪ್ಪ
ರಾಮಪ್ಪ
Published on

ದೇವದುರ್ಗ: ಜಾಲಹಳ್ಳಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದ ಗೋಪುರ ಸ್ವಚ್ಛ ಮಾಡುವಾಗ ಕಾಲುಜಾರಿ ಬಿದ್ದು ಯುವಕ ಶನಿವಾರ ಮೃತಪಟ್ಟಿದ್ದಾರೆ.

ದೇವಸ್ಥಾನದ ಅರ್ಚಕ ಜಯಪ್ಪ ಪೂಜಾರಿ ಮಗ ರಾಮಪ್ಪ ಪೂಜಾರಿ (26) ಮೃತ. ಏ.23ರಂದು ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಜಾತ್ರೆ ನಡೆಯಲಿದ್ದು,
ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಪ್ರತಿ ವರ್ಷ ರಾಮಪ್ಪ ಪೂಜಾರಿ ಗೋಪುರ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಗೋಪುರ ಸ್ವಚ್ಛ ಮಾಡುವಾಗ ಕಾಲುಜಾರಿ ಕೆಳಗೆ ಬಿದ್ದಿದ್ದರಿಂದ ತೀವ್ರ ರಕ್ತ ಸಾವ್ರವಾಗಿದೆ. ದೇವದುರ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ರಾಮಪ್ಪ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಜಾಲಹಳ್ಳಿ ಪಿಎಸ್‌ಐ ಬಸವರಾಜ ನಾಯಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net