ನೆಚ್ಚಿನ ಕೋತಿ "ಚಿಂಟು" ದೇವಸ್ಥಾನ ಉದ್ಘಾಟನೆ ಮಾಡಿದ ಮಾಜಿ ಸಚಿವ ಸಾ.ರಾ ಮಹೇಶ್​; ಮೈಸೂರಿನ ದಟ್ಟಗಳ್ಳಿಯಲ್ಲಿರುವ ದೇಗುಲ

MYSORE
Published on

ಮೈಸೂರು: ಕೋತಿಗಾಗಿ ದೇವಾಲಯ ನಿರ್ಮಿಸಿದ ಮಾಜಿ ಸಚಿವ ಸಾ.ರಾ. ಮಹೇಶ್ ಅವರು, ಸಾಕು ಪ್ರಾಣಿಯ ಪ್ರತಿಮೆಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಚಿಂಟು ಎನ್ನುವ ಕೋತಿಯ ದೇಗುಲ ಅನಾವರಣ ಸಂದರ್ಭದಲ್ಲಿ ಹೋಮ ಹವನ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಮೈಸೂರಿನ ದಟ್ಟಗಳ್ಳಿಯ ಸಾ.ರಾ. ಫಾರಂಹೌಸ್​ನಲ್ಲಿ ಚಿಂಟು ಕೋತಿ ದೇಗುಲ ಉದ್ಘಾಟನೆಯಾಗಿದೆ.

ಕಲ್ಲಿನ ಮಂಟಪದಿಂದ ಕಟ್ಟಲಾದ ದೇಗುಲದಲ್ಲಿ ಚಿಂಟು ಕೋತಿ, ಕುರಿ ಮೇಲೆ ಕುಳಿತ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ದೇವಸ್ಥಾನ ಉದ್ಘಾಟನೆ ಮಾಡಲಾಯಿತು. ಕೆಲವೇ ಕೆಲವು ಆಪ್ತರಿಗೆ ಮಾತ್ರ ಕಾರ್ಯಕ್ರಮಕ್ಕೆ‌ ಆಹ್ವಾನ ನೀಡಲಾಗಿತ್ತು.

ಡಿ.31ರಂದು ವಿದ್ಯುತ್ ತಗುಲಿ ಮೃತಪಟ್ಟಿದ್ದ ಚಿಂಟು ಕೋತಿ ನೆನಪಿನಲ್ಲಿ ದೇಗುಲ ಉದ್ಘಾಟಿಸಲಾಗಿದೆ. ವಿದೇಶ ಪ್ರವಾಸ ರದ್ದುಗೊಳಿಸಿ ಚಿಂಟು ಅಂತ್ಯ ಸಂಸ್ಕಾರಕ್ಕೆ ಓಡೋಡಿ ಬಂದಿದ್ದರು ಮಾಜಿ ಸಚಿವ ಸಾ.ರಾ. ಮಹೇಶ್.

ನೆಚ್ಚಿನ ಚಿಂಟು ಮೃತದೇಹದ ಬಳಿ ಗಳಗಳನೆ ಕಣ್ಣೀರಿಟ್ಟಿದ್ದ ಸಾರಾ. ಅವರು, ಶಿಲ್ಪ ಕಲಾವಿದ ಅರುಣ್‌ ಯೋಗಿ ಅವರಿಂದ ಪ್ರತಿಮೆ ಕೆತ್ತನೆ ಮಾಡಿಸಿದ್ದಾರೆ. ಬರೋಬ್ಬರಿ 20 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net