

ಸಂಡೂರು: ವಿಠಲಾಪುರದಲ್ಲಿ ದಲಿತರಿಗೆ ದೇವಸ್ಥಾನಗಳ ಪ್ರವೇಶ, ಕ್ಷೌರ ಹಾಗೂ ಹೋಟೆಲ್‌ಗಳಲ್ಲಿ ಪ್ರವೇಶ ನಿರಾಕರಣೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಅಸ್ಪಶ್ಯತೆ ನಿವಾರಣೆ ಕುರಿತು ಗ್ರಾಮದಲ್ಲಿ ಮಂಗಳವಾರ ಸಭೆ ನಡೆಸಿ ಜಾಗೃತಿ ಮೂಡಿಸಲಾಯಿತು.
ತಹಸೀಲ್ದಾರ್ ಅನಿಲ್‌ಕುಮಾರ್ ಮಾತನಾಡಿ, ಅಸ್ಪಶ್ಯತೆ ಆಚರಣೆ ಅಮಾನವೀಯವಾದದ್ದು ಮತ್ತು ಶಿಕ್ಷಾರ್ಹ ಅಪರಾಧ. ಗ್ರಾಮದಲ್ಲಿ ಎಲ್ಲ ಸಮುದಾಯದವರು ಸಮಾನರಾಗಿ ಕಾಣಬೇಕು. ಯಾರಾದರೂ ಅಸ್ಪಶ್ಯತೆ ಆಚರಣೆ ಮಾಡಿರುವುದು ಸಾಬೀತಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ ಮಾತನಾಡಿ, ಕ್ಷೌರಿಕ ವೃತ್ತಿ ಮಾಡುವವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು ತಾರತಮ್ಯ ಎಸಗಿದಲ್ಲಿ ಕಠಿಣ ಕಾನೂನು ಕ್ರಮ ವಹಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರೊಂದಿಗೆ ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನಕ್ಕೆ ತೆರಳಿ ದಲಿತರ ಪ್ರವೇಶದೊಂದಿಗೆ ಪೂಜೆ ಸಲ್ಲಿಸಲಾಯಿತು.
ತಾಪಂ ಇಒ ರೇಣುಕಾಚಾರ್ಯ ಸ್ವಾಮಿ, ತೋರಣಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಯು.ಡಾಕೇಶ್, ಡಿಎಸ್‌ಎಸ್ ತಾಲೂಕು ಸಂಚಾಲಕ ಎಂ.ರಾಮಕೃಷ್ಣ ಹೆಗಡೆ, ಎಲ್.ಎಚ್.ಶಿವಕುಮಾರ್, ಎಂ.ಶಿವಲಿಂಗಪ್ಪ, ಹನುಮಂತರೆಡ್ಡಿ, ಎಚ್.ಬಿ.ಸುಬ್ಬಣ್ಣ, ಅಂತಾಪುರ ಗಂಗಾಧರ, ವಿಠಲಾಪುರ ಚೌಡಪ್ಪ ಬಾಬು, ಗ್ರಾಮದ ಮುಖಂಡರಾದ ಕುರುಬರ ಎಂ.ತಿರುಮಲ, ಕೆ.ಸದಾಶಿವ, ಎಂ.ತಿಮ್ಮಪ್ಪ, ಕೆ.ಎಂ.ಸ್ವ್ವಾಮಿ, ದೊಡ್ಡಬಸಪ್ಪ, ಮಾಂತೇಶ್, ರಾಜಗೋಪಾಲ, ಗೊಲ್ಲರ ತಿಪ್ಪೇಸ್ವಾಮಿ, ನಾಯ್ಕರ ಭಾಂಡ್ರಾವೆಪ್ಪ, ಲಿಂಗಾಯತರ ಗಿರಿಮಲ್ಲಪ್ಪ ಮುಂತಾದವರಿದ್ದರು.