ದೇವಸ್ಥಾನ ಅಭಿವೃದ್ಧಿ ಎಲ್ಲರ ಜವಾಬ್ದಾರಿ

23KSH2
Published on

ಕೋ.ಶಿವಾಪುರ: ಎಲ್ಲರ ಜೀವನದಲ್ಲಿ ದೇವಸ್ಥಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ಅಭಿವೃದ್ಧಿ ಮಾಡಲು ಅನುದಾನ ತರಲಾಗಿದ್ದು, ಕಾಮಗಾರಿ ಗುಣಮಟ್ಟದ್ದಾಗಿ ಮಾಡಬೇಕು ಎಂದು ಶಾಸಕ ವಿಶ್ವಾಸ ವೆದ್ಯ ತಿಳಿಸಿದರು.

ಮಂಗಳವಾರ ಕರೆಮ್ಮ ದೇವಸ್ಥಾನಕ್ಕೆ ಶಾಸಕರ ಅನುದಾನದಡಿ 5 ಲ ರೂಪಾಯಿ ವೆಚ್ಚದ ಸಮುದಾಯ ಭವನದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಮುಖಂಡರಾದ ಸಿಂಗಯ್ಯ ಮಠಪತಿ, ಗ್ರಾಪಂ ಅಧ್ಯ ತವನಪ್ಪ ಟೋಪಣ್ಣವರ, ಬಸವರಾಜ ವಾಲಿ, ಪಾರೀಶನಾಥ ಟೋಪಣ್ಣವರ, ಹನಮಂತ ಕೊತ್ತಲ, ಶಿವಪ್ಪ ದಾಸಯ್ಯನವರ, ಸಿದ್ದಲಿಂಗ ಕುಂದರಗಿ, ಶಂಕ್ರೆಪ್ಪ ಚಂದರಗಿ, ಮುಗಟಸಾಬ ಮುಗಟಖಾನ, ಮಹಾದೇವಪ್ಪ ಕಲಾರಕೊಪ್ಪ, ಮಹಾಂತೇಶ ಜಕ್ಕನ್ನವರ, ಶ್ರೀಕಾಂತ ದೇಸಾಯಿ, ಶಿವನಗೌಡ ಗೌಡರ, ಮಹಾದೇವಯ್ಯ ಪೂಜೇರಿ, ಮಹಾದೇವ ಕುಂದರಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net