ಸಂಗಮನಾಥ ಕ್ಷೇತ್ರ ಸ್ವಚ್ಛಗೊಳಿಸಿದ ಯುವಕರು

KSM 11-1
Published on

ಕೂಡಲಸಂಗಮ: ಕೂಡಲಸಂಗಮ ಅಭಿವೃದ್ಧಿ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಾಯಕದ ಅರಿವು ಮೂಡಿಸುವ ಉದ್ದೇಶದಿಂದ ‘ನಿದ್ದೆಯಲ್ಲಿರುವ ಮಂಡಳಿ ಸಿಬ್ಬಂದಿ, ರಕ್ಷಿಸೋಣ ಬನ್ನಿ ಕೂಡಲಸಂಗಮ’ ಎಂಬ ಸ್ವಚ್ಛತಾ ಅಭಿಯಾನವನ್ನು ಕೂಡಲಸಂಗಮ ಗ್ರಾಮದ 30ಕ್ಕೂ ಅಧಿಕ ಯುವಕರು ಭಾನುವಾರ ಬೆಳ್ಳಗೆ ಪೊರಕೆ ಹಿಡಿದು ದೇವಾಲಯ ಒಳ, ಹೊರ ಆವರಣ, ನದಿಯ ದಡ, ಪ್ರವೇಶ ದ್ವಾರಗಳನ್ನು ಸ್ವಚ್ಛಗೊಳಿಸುವ ಮೂಲಕ ಆರಂಭಿಸಿದರು.

ಮಹಾಂತೇಶ ಕುರಿ, ತೀರ್ಥಲಿಂಗ ಬೆಳಗಲ್ಲ ಮಾತನಾಡಿ, ಮಂಡಳಿ ಸಿಬ್ಬಂದಿ ಸಮಪರ್ಕ ಕಾರ್ಯನಿರ್ವಹಿಸದೆ ಇರುವುದರಿಂದ ನಿತ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಸ್ವಚ್ಛತೆ ಹಾಗೂ ಮೂಲ ಸೌಲಭ್ಯಗಳ ಕೊರತೆ ಅನುಭವಿಸುತ್ತಿದ್ದಾರೆ. ನಿತ್ಯ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಈ ಅಭಿಯಾನ ಪ್ರತಿ ಭಾನುವಾರ ಮಂಡಳಿಯ ವಿವಿಧ ಸ್ಥಳಗಳಲ್ಲಿ ನಡೆಯುವುದು, ಸ್ವಇಚ್ಛೆಯಿಂದ ಎಲ್ಲರೂ ಭಾಗವಹಿಸಬಹುದು. ಮುಂದಿನ ಭಾನುವಾರ ಸಭಾ ಭವನ, ಪೂಜಾವನವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಬಸವರಾಜ ಗೌಡರ, ಮಹೇಶ ಗುಡಿ, ಮುತ್ತುರಾಜ ಕಾಳಗಿ ಮಾತನಾಡಿ, ಮಂಡಳಿಗೆ ಪೂರ್ಣಾವಧಿ ಆಯುಕ್ತರನ್ನು ಸರ್ಕಾರ ನೇಮಿಸುವ ಕಾರ್ಯವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ನಮ್ಮದು ಅಭಿಯಾನ ಪ್ರತಿಭಟನೆ ಅಲ್ಲ
ಮಂಡಳಿಯ ಲೆಕ್ಕ ಅಧೀಕ್ಷಕ ಬಸವರಾಜ ಮಡಿವಾಳರ, ಪ್ರಥಮ ದರ್ಜೆ ಸಹಾಯಕ ಬಸವರಾಜ ಕಳ್ಳಿ, ನಮ್ಮಲ್ಲಿ ಸಿಬ್ಬಂದಿ ಇದೆ ಸ್ವಚ್ಛ ಮಾಡಿಸುತ್ತೇವೆ ಎಂದಾಗ ಗ್ರಾಮದ ಯುವಕರು ನಾವು ಇರುವುದು 30 ಜನ. ದೈಹಿಕ ಅಂತರದೊಂದಿಗೆ ಸ್ವಚ್ಛತೆ ಕೈಗೊಳ್ಳುತ್ತೇವೆ. ಈ ಕುರಿತು ಮಂಡಳಿ ಆಯುಕ್ತರಿಗೆ, ಪೊಲೀಸ್ ಇಲಾಖೆಗೆ ಮನವಿ ಕೊಟ್ಟಿದ್ದೇವೆ. ನಮ್ಮದು ಅಭಿಯಾನ ಪ್ರತಿಭಟನೆ ಅಲ್ಲ. ನಾವು ನಮ್ಮ ಸುಕ್ಷೇತ್ರ ಉಳಿಸುವ ತೀರ್ಮಾಣ ಮಾಡಿದ್ದೇವೆ ಎಂದು ಪೊರಕೆ ಹಿಡಿದು ಸ್ವಚ್ಛತೆ ಆರಂಭಿಸಿದರು. ನಮ್ಮ ಸಿಬ್ಬಂದಿ ಸ್ವಚ್ಛ ಮಾಡಿದ್ದಾರೆ, ನೀವು ಎಲ್ಲಿ ಮಾಡುತ್ತಿರಿ ಎಂದು ಮಂಡಳಿಯ ಅಧಿಕಾರಿಗಳು ಹೇಳಿದಾಗ ಯುವಕರು ಬನ್ನಿ ತೋರಿಸುತ್ತಿವೆ ಎಂದು ಕಸದ ರಾಸಿಯನ್ನು ತೋರಿಸಿ ಸ್ವಚ್ಛಗೊಳಿಸಿದಾಗ ಅಧಿಕಾರಿಗಳಿಗೆ ಮುಜುಗರ ಉಂಟಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net