

ಭರಮಸಾಗರ: ಪಟ್ಟಣದಲ್ಲಿ ಸೋಮವಾರ ಜನರು ನಾಗರಚೌತಿ ಆಚರಿಸಿದರು.
ಇಲ್ಲಿನ ಆಂಜನೇಯ ದೇವಸ್ಥಾನದ ದೊಡ್ಡ ಅರಳಿಮರದ ಕಟ್ಟೆ ಹಾಗೂ ದೊಡ್ಡಕೆರೆ ಮೂಲೆಯಲ್ಲಿರುವ ಬನ್ನಿ ಮರದ ಬಳಿಯ ನಾಗರ ವಿಗ್ರಹಗಳಿಗೆ ಶ್ರದ್ಧಾ-ಭಕ್ತಿಯಿಂದ ಹಾಲನ್ನೆರೆದು ಪೂಜಿಸಿದರು.
ಶ್ರಾವಣದ ಮೊದಲ ಹಬ್ಬ ನಾಗರ ಚೌತಿ ಪಂಚಮಿಯಲ್ಲಿ ಕೆಲವರು ಆರಾಧಿಸಿದರೆ, ಭಾದ್ರಪದದಲ್ಲಿ ಗಣೇಶ ಚೌತಿಯಂದು ನಾಗರ ಪೂಜೆ ಮಾಡಿ ಮಂಗಳವಾರ ಮರಿನಾಗದೇವರನ್ನು ಆರಾಧಿಸಿದರು.
ಈ ವೇಳೆ ನಾಗದೇವರಿಗೆ ಇಷ್ಟವಾದ ಪದಾರ್ಥಗಳನ್ನು ನೈವೇದ್ಯ ಮಾಡಿ ಪ್ರಾರ್ಥಿಸಿದರು.