ದೇವಸ್ಥಾನ ವಾರ್ಷಿಕೋತ್ಸವ ಸಂಪನ್ನ

23sunti01
ಮಾರುತಿನಗರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ ಹಾಗೂ ಹನುಮಾನ್ ಜಯಂತಿ ಅಂಗವಾಗಿ ಗಣಪತಿ ಹೋಮ ನೇರವೇರಿಸಲಾಯಿತು.
Published on

ಸುಂಟಿಕೊಪ್ಪ: ಕೊಡಗರಹಳ್ಳಿ ಮಾರುತಿ ನಗರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ ಹನುಮಾನ್ ಜಯಂತಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಶೃದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಪುಣ್ಯಾಹ ಗಣಪತಿ ಹೋಮ, 9.30 ಗಂಟೆಗೆ ನವಕಲಶ ಪೂಜೆ, 10.30 ಗಂಟೆಗೆ ಕಲಶಾಭಿಷೇಕ, 12.30ಕ್ಕೆ ಮಂತ್ರಾಕ್ಷತೆ, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯನ್ನು ನೆರವೇರಿಸಲಾಯಿತು. ದಿನದ ವಿಶೇಷ ಪೂಜಾ ಕೈಕರ್ಯಗಳನ್ನು ದೇವಾಲಯದ ಅರ್ಚಕರಾದ ನರಸಿಂಹ ಭಟ್ ಹಾಗೂ ಗಣೇಶ್ ಶರ್ಮಾ ನೇರವೇರಿಸಿದರು.

ಇದೇ ಸಂದರ್ಭ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ಹನುಮಾನ್ ಜಯಂತಿಯ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಭಕ್ತಾದಿಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಭಕ್ತಾಗಳಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net