ದೇವಾಲಯ ಮರು ನಿರ್ಮಾಣಕ್ಕೆ ಚಾಲನೆ

19ark1
Published on

ಅರಕಲಗೂಡು: ಹಳ್ಳಿಗಾಡಿನಲ್ಲಿ ಅಳಿವಿನ ಅಚಿಚಿನಲ್ಲಿರುವ ದೇವಸ್ಥಾನಗಳನ್ನು ಜೀರ್ಣೋದ್ಧಾರ ಪಡಿಸಿ ಸಂಸ್ಸತಿಯನ್ನು ಉಳಿಸುವುದು ಪುಣ್ಯದ ಕಾಯಕವಾಗಿದೆ ಎಂದು ಶಿರದನಹಳ್ಳಿ ಬಸವಕಲ್ಯಾಣ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಮಂಗಳವಾರ ಶ್ರೀ ಕಾಡು ಸಿದ್ದೇಶ್ವರಸ್ವಾಮಿ ದೇವಾಲಯ ಮರು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಅರಣ್ಯ ಪ್ರದೇಶಗಳಲ್ಲಿ ಶಿಥಿಲವಾಗಿರುವ ಹಳೆಯ ದೇವಸ್ಥಾನ ಅಭಿವೃದ್ಧಿ ಪಡಿಸಿದರೆ ಈ ಭಾಗದ ಹತ್ತಾರು ಹಳ್ಳಿಗಳ ಜನರಿಗೆ ಸಾಕ್ಷಾತ್ ದೇವರ ದರ್ಶನ ಭಾಗ್ಯ ಸಿಗಲಿದೆ. ಇದೊಂದು ಶ್ರದ್ಧಾ ಕೇಂದ್ರವಾಗಿ ರೂಪುಗೊಂಡು, ನೂರಾರು ಭಕ್ತರ ಸಂಗಮಕ್ಕೆ ನೆಲೆಯಾಗಲಿದೆ ಎಂದರು.
ಮುಖಂಡರಾದ ಬಾಗೀವಾಳು ಕರಿಬಸವಯ್ಯ, ಸೀಬಹಳ್ಳಿ ಕುಮಾರಸ್ವಾಮಿ, ಪ್ರಕಾಶ್, ಯಗಟಿ ಬಸಪ್ಪ, ಲೊಕೇಶ್, ಮಹದೇವಪ್ಪ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net