ಮಾವಿನಕೆರೆ ದೇಗುಲ ಮರು ಪ್ರತಿಷ್ಠಾಪನೆ

31Hnp1
Published on


ಹೊಳೆನರಸೀಪುರ: ಮಾವಿನಕೆರೆ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಹಾಗೂ ಆಂಜನೇಯ ದೇವಾಲಯ ಮರು ಪ್ರತಿಷ್ಠಾಪನೆ ಬುಧವಾರ ಸಂಭ್ರಮದಿಂದ ನೆರವೇರಿತು.ಮೈಸೂರಿನ ಭಾಷ್ಯಂ ಸ್ವಾಮಿ ಈ ಸಂದರ್ಭ ಮಾತನಾಡಿ,ದೇವತಾ ಕಾರ್ಯಗಳನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡುವವರಿಗೆ ಭಗವಂತ ಉತ್ತಮ ಫಲಗಳನ್ನು ನೀಡುತ್ತಾನೆ ಎಂದರು. ಅರ್ಚಕ ವಿಜಯಕುಮಾರ್ ಮಾತನಾಡಿ, ದೇವಾಲಯಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೆ ಅತಿ ಹೆಚ್ಚು ಪ್ರೋತ್ಸಾಹ ಮತ್ತು ಅನುದಾನ ನೀಡಿ ಶಾಸಕ ರೇವಣ್ಣ ಸೇವೆ ಸಲ್ಲಿಸಿದ್ದಾರೆಂದು. ಇದೇ ಸಂದರ್ಭ ಮಾವಿನಕೆರೆ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ರೇವಣ್ಣ ದಂಪತಿಗಳಿಗೆ ಬೆಳ್ಳಿಗದೆ ನೀಡಿ ಸನ್ಮಾನಿಸಿದರು.
ಕಳೇದ ಮೂರುದಿನಗಳಿಂದ ಆಗಮಿಕರು ದೇವಾಲಯದಲ್ಲಿ ಹಲವು ಹೋಮ, ಹವನ ನಡೆಸಿ, ವಿವಿಧ ಬಗೆಯ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಬುಧವಾರ ಕುಂಭಾಭಿಷೇಕ, ಪ್ರತಿಷ್ಠಾಪನೆ ವಿಧಿಗಳು ಸಂಪನ್ನಗೊಂಡವು. ದೇವಾಲಯ ಸಮಿತಿಯ ಮುಖ್ಯಸ್ಥ ಅನಂತರಾಮು, ತಹಸೀಲ್ದಾರ್ ಕೃಷ್ಣಮೂರ್ತಿ, ತಾಪಂ ಇಒ ಗೋಪಾಲ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಬೆಂಗಳೂರು ಕಾರಂಜಿ ಆಂಜನೇಯ ದೇವಾಯಯದ ಪ್ರಧಾನ ಅರ್ಚಕ ಶ್ರೀನಿವಾಸ, ದೇವಾಲಯದ ಅರ್ಚಕ ಜನಾರ್ಧನ ಭಟ್ಟ, ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net