ಅಮರೇಶ್ವರ ದೇಗುಲ ಉದ್ಘಾಟನೆ ನಾಳೆ

8 nugge 1
Published on

ನುಗ್ಗೇಹಳ್ಳಿ: ನುಗ್ಗೇಹಳ್ಳಿಯಲ್ಲಿ ನಿರ್ಮಿಸಿರುವ ಶ್ರೀ ಅಮರೇಶ್ವರ ಸ್ವಾಮಿ ದೇಗುಲ ಡಿ. 10ರಂದು ಉದ್ಘಾಟನೆಗೊಳ್ಳಲಿದೆ. ನುಗ್ಗೇಹಳ್ಳಿ ಪುರ ವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಶ ಕುಂಭಾಭಿಷೇಕ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಅಂದು ಬೆಳಗ್ಗೆ 10ಕ್ಕೆ ಆಯೋಜನೆಗೊಂಡಿರುವ ವೇದಿಕೆ ಸಮಾರಂಭದಲ್ಲಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ, ನೀರಾವರಿ ಇಲಾಖೆ ವಿಶೇಷ ಭೂಸ್ವಾಧೀನ ಅಧಿಕಾರಿ ಮಂಜುನಾಥ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪರಮೇಶ, ಉದ್ಯಮಿ ಸಿ.ಬಿ. ಚೆನ್ನಮಲ್ಲಪ್ಪ, ಮಕ್ಕಳ ತಜ್ಞೆ ಡಾ. ಆಶಾ ಬೆನಕಪ್ಪ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net