ಗುರು- ಶಿಷ್ಯ ಸಂಬಂಧ ವಿಶಿಷ್ಟ -  ಮಂಜುಳಗಿರಿ ವೆಂಕಟರಮಣ ಭಟ್ಟ ಅನಿಸಿಕೆ

PTR_12 JUL_4
Published on

ಪುತ್ತೂರು: ಗುರು- ಶಿಷ್ಯ ಸಂಬಂಧ ವಿಶಿಷ್ಟವಾದುದು. ಗುರು ಎಂಬ ಪದದಲ್ಲಿ, ‘ಗು’ ಅಂದರೆ ಅಜ್ಞಾನ, ‘ರು’ ಎಂದರೆ ನಿವಾರಣೆ ಮಾಡುವುದು. ವಿದ್ಯೆಯಲ್ಲಿ ಉನ್ನತಿ, ಯಶಸ್ಸು, ಕೀರ್ತಿ ಬರುತ್ತದೆ. ಮನೋಬಲ ಹೆಚ್ಚಾಗುತ್ತದೆ ಎಂದು ಮಂಜುಳಗಿರಿ ವೆಂಕಟರಮಣ ಭಟ್ಟ ಹೇಳಿದರು.

ವೇದ ಸಂವರ್ಧನ ಪ್ರತಿಷ್ಠಾನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಯೋಗದಲ್ಲಿ ನಡೆಸುತ್ತಿರುವ ವಯಸ್ಕರ ವೇದ ಕಲಿಕಾ ಶಿಬಿರದಲ್ಲಿ ಶಿಷ್ಯರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಪಿ. ಉದಯ ಕುಮಾರ್ ಹಿಮಾಲಯ ಪ್ರವಾಸ, ಕೈಲಾಸ ಯಾತ್ರೆಯ ಅನುಭವ ಹಂಚಿಕೊಂಡರು.

ವೇದ ಸಂವರ್ಧನ ಪ್ರತಿಷ್ಠಾನದ ವೇದ ಬ್ರಹ್ಮ ಗೌರವ ಪ್ರಾಚಾರ್ಯ ಬಡಜ ಜಯರಾಮ ಜೋಯಿಸರು, ಗುರುಗಳಾದ ಮಂಜುಳಗಿರಿ ವೆಂಕಟರಮಣ ಭಟ್ಟ, ಉದಯಕೃಷ್ಣ ಅವರಿಗೆ ವಿದ್ಯಾರ್ಥಿಗಳ ಪರವಾಗಿ ಹಿರಿಯರಾದ ಬಿ.ಎಲ್ ಪಂಪ, ಕೃಷ್ಣಮೂರ್ತಿ ಹೆಬ್ಬಾರಬೈಲು, ಸತ್ಯನಾರಾಯಣ ಭಟ್ಟ ಸರ್ಪಂಗಳ ಫಲ ಸಮರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net